ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕುಡಿಯುವ ಕೆರೆ ಸರ್ಪದ ಕಾವಲು, ನೀರಿಗೆ ಬರ್ತಿರಾ ? ಹಾಗಿದ್ರೇ ಹುಷಾರ್ !

ಕುಂದಗೋಳ : ಇಲ್ಲೋಂದು ಗ್ರಾಮಕ್ಕೆ ಸರ್ಪಗಳ ಕಾಟ ಅತಿಯಾಗಿ ಕಾಡ್ತಾ ಇದೆ, ಅದೇಷ್ಟರ ಮಟ್ಟಿಗೆ ಅಂದ್ರೇ ಕುಡಿಯಲು ಕೆರೆಗೆ ನೀರು ತರಲು ಹೋದ್ರೆ ನಿತ್ಯ ಜನರಿಗೆ ಈ ಸರ್ಪಗಳದ್ದೇ ದರ್ಶನ, ಅಪ್ಪಿ ತಪ್ಪಿ ಚಿಕ್ಕಮಕ್ಕಳು ಕೆರೆ ನೀರಿಗೆ ಹೋದ್ರೆ ಎಲ್ಲಿ ಅನಾಹುತ ಆಗುತ್ತೋ ? ಎಂಬ ಭಯ.

ಹೀಗೆ ಸರ್ಪಗಳ ಕಾಟದಿಂದ ಬೇಸತ್ತವರೇ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು, ಈ ಹಿಂದೆ ತಮ್ಮೂರ ಕೆರೆಯಲ್ಲಿ ಹಾವುಗಳ ಸಂಖ್ಯೆ ಹೆಚ್ಚುತ್ತಿದೆ, ಜನರಿಗೆ ನೀರು ತರಲು ಭಯ ಉಂಟಾಗುತ್ತಿದೆ ಎಂದು ಈ ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಪರಿಹಾರವಿಲ್ಲಾ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲಾ.

ಈಗ ಹಾವುಗಳು ಜನ ಕೆರೆಯಲ್ಲಿ ನೀರು ತುಂಬಲು ಹಾಕಿಸಿದ ಮೆಟ್ಟಿಲುಗಳ ಮೇಲೆ ಈ ರೀತಿ ವಿರಾಜಮಾನವಾಗಿ ಓಡಾಡುತ್ತಿದ್ದು, ಜನರಿಗೆ ಕೆರೆ ನೀರು ತರುವುದೇ ಕಷ್ಟವಾಗಿದೆ. ಇನ್ನೂ ರಾತ್ರಿ ಹೊತ್ತು ಕೆರೆ ಹೋಗೋಕೆ ಭಯ ದುಪ್ಪಟ್ಟಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನಿಸಿ, ಸರ್ಪಗಳಿಂದ ಈ ಕುಡಿಯುವ ನೀರಿನ ಕೆರೆಗೆ ಮುಕ್ತಿ ಕೊಡಿ ಎನ್ನುತ್ತಾ ಗುಡೇನಕಟ್ಟಿ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

02/11/2021 01:30 pm

Cinque Terre

68.82 K

Cinque Terre

11

ಸಂಬಂಧಿತ ಸುದ್ದಿ