ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಒಂದಿಲ್ಲ ಒಂದು ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದಾರೆ. ಅದೇ ರೀತಿ ವಾರ್ಡ್ ನಂಬರ 64 ರಲ್ಲಿ ಬರುವ, ಬಾಕಳೆಗಲ್ಲಿ ಗಣಪತಿ ದೇವಸ್ಥಾನ ಮುಂದೆ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ರಸ್ತೆ ಮಧ್ಯದಲ್ಲಿ ನೀರು ಹರಿಯುತ್ತಿದೆ. ಸುಮಾರು ಒಂದು ತಿಂಗಳಾದರು ಯಾರು ಕೂಡ ತಿರುಗಿ ನೋಡುತ್ತಿಲ್ಲ, ಅಲ್ಲಿನ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಮಸ್ಯೆ ಬಗ್ಗೆ ತಿಳಿಸಿದರು ಯಾವ ಅಧಿಕಾರಿಯೂ ಕ್ಯಾರೆ ಎನ್ನುತ್ತಿಲ್ಲವೆಂದು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Kshetra Samachara
31/10/2021 01:43 pm