ಅಳ್ನಾವರ : ಹಲವು ತಿಂಗಳುಗಳ ಹಿಂದೆ ಅಂದರೆ ಮಾರ್ಚ್-ಏಪ್ರಿಲ್ ನಲ್ಲಿ ಅಕಾಲಿಕವಾಗಿ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ತಾಲೂಕಿನಾದ್ಯಂತ ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿತ್ತು.
ಇದು ಕಂಬಾರಗಣವಿ ಊರಿಗೆ ಸಂಪರ್ಕಿಸುವ ಒಂದೇ ಒಂದು ಸೇತುವೆ.ಹಲವು ತಿಂಗಳ ಹಿಂದೆ ಸುರಿದ ಮಳೆಯು ಭಾರಿ ಪ್ರಮಾಣದ ಅನಾಹುತವನ್ನೇ ಸೃಷ್ಟಿಸಿತ್ತು.ದನ ಕರುಗಳು ತೇಲಿಕೊಂಡು ಹೋಗಿದ್ದವು.ಈ ಊರ ಜನರು ಸಂಪರ್ಕ ಕಳೆದುಕೊಂಡು ಆ ಕಡೆ ಇಂದ ಈ ಕಡೆ ದಾಟಲಾಗದೆ ಹರಸಾಹಸ ಪಟ್ಟಿದ್ದರು.
ಇದು ಕೇವಲ ಒಂದು ವರ್ಷದ ಸಂಗತಿ ಅಲ್ಲ.ಪ್ರತಿ ವರ್ಷ ಮಳೆಗಾಲ ಬಂತೆಂದರೆ ಈ ರೀತಿ ಒಂದಿಲ್ಲ ಒಂದು ಸಮಸ್ಯೆಗೆ ಈ ಗ್ರಾಮದ ಜನರು ತುತ್ತಾಗುತ್ತಾರೆ.ಇವರನ್ನ ಕೇಳುವವರೇ ಇಲ್ಲದಂತಾಗಿದೆ.
ಎಷ್ಟೋ ಜನರು ತಮ್ಮ ಸೂರು ಕಳೆದುಕೊಂಡರು.ಕುರಿ,ದನ ಕರುಗಳು ನೀರಲ್ಲಿ ಕೊಚ್ಚಿ ಹೋದವು,ರಸ್ತೆ ಹಾಳಾಯಿತು,ಈಗ ಕೇವಲ ಅದರ ಅವಶೇಷ ಗಳು ಮಾತ್ರ ನೋಡಲು ಸಾಧ್ಯ.
ಸೇತುವೆಗಳು,ರಸ್ತೆ ಗಳು ಹಾಳಾಗಿ ಹೋಗಿದ್ದರು 6-7 ತಿಂಗಳು ಕಳೆದರೂ ಅದರ ಕಾರ್ಯ ಮಾತ್ರ ಇನ್ನೂ ಸ್ತಬ್ಧವಾಗಿಯೇ ಇದೆ.ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಮಾಜಿ ಶಾಸಕ ಹಾಗೂ ಸಚಿವ ಸಂತೋಷ ಲಾಡ್,ಹಾಲಿ ಶಾಸಕರಾದ ನಿಂಬಣ್ಣವರ ಇವರಷ್ಟೇ ಅಲ್ಲ ಕೇಂದ್ರ ದಿಂದ ಒಂದು ತಂಡ ಹಾಳಾದ ಸೇತುವೆ ಹೊಲ ಗದ್ದೆ ಗಳನ್ನ ವೀಕ್ಷಣೆ ಮಾಡಲು ಬಂದು ಹೋದರು.
ಇವರೆಲ್ಲರ ವೀಕ್ಷಣೆ ಕೇವಲ ನೆಪ ಮಾತ್ರ ವೆಂಬಂತೆ ಭಾಸವಾಗುತ್ತಿದೆ.ಸುಮಾರು 6-7 ತಿಂಗಳು ಕಳೆದರೂ ಯಾವುದೇ ಕೆಲಸ ಪ್ರಾರಂಭ ವಾಗಿಲ್ಲ.ಭರವಸೆ ಕೊಟ್ಟಂತೆ ಆದಷ್ಟು ಬೇಗ ಕಾರ್ಯ ಪ್ರಾರಂಭ ಮಾಡಬೇಕಾಗಿದೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್,ಅಳ್ನಾವರ.
Kshetra Samachara
30/10/2021 05:53 pm