ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಮ್ಮೂರ ರಸ್ತೆ ಅಭಿವೃದ್ಧಿ ಮಾಡ್ರೀ ಅಧಿಕಾರಿ, ಜನಪ್ರತಿನಿಧಿಗಳೇ

ಕುಂದಗೋಳ : ಮತಕ್ಷೇತ್ರದ ಶರೇವಾಡ ಬೆಟದೂರು ಮಾರ್ಗವಾಗಿ ಹುಲಗೂರು ಸವಣೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣಶ ಹಾಳಾಗಿದ್ದು, ಈ ರಸ್ತೆ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ಸುದ್ಧಿ ಪ್ರಕಟಿಸಿ ಶಾಸಕರ ಗಮನಕ್ಕೆ ತರುವಂತೆ ಕೋರಿದ್ದಾರೆ.

ಈ ಹಿಂದೆ ದಿ.ಮಾಜಿ ಸಚಿವ ಸಿ.ಎಸ್.ಶಿವಳ್ಳಿಯವರು ಹಂಚಿನಾಳದವರೆಗೆ ಈ ರಸ್ತೆ ಅಭಿವೃದ್ಧಿ ಪಡಿಸಿದ್ದರು, ಪ್ರಸ್ತುತ ಆ ರಸ್ತೆ ತಗ್ಗು, ಗುಂಡಿ ಬಿದ್ದು ಹಾಳಾಗಿ ವಾಹನ ಸವಾರರು ಸೇರಿದಂತೆ ಸಾರಿಗೆ ಬಸ್ ಸಂಚಾರಕ್ಕೆ ಅನಾನುಕೂಲವಾಗಿದೆ, ಇನ್ನೂ ಗರ್ಭಿಣಿಯರು, ವಯೋವೃದ್ಧರು ಈ ರಸ್ತೆಯಲ್ಲಿ ಸಂಚರಿಸಿದರೇ ಯಾವಾಗ ? ಏನು ? ಅನಾಹುತಕ್ಕೆ ಕಾರಣವಾಗುತ್ತೋ ಗೊತ್ತಿಲ್ಲ, ಅದಲ್ಲದೇ ಇತ್ತಿಚೆಗೆ ಈ ರಸ್ತೆಯಲ್ಲಿ ಅಪಘಾತ ಸಹ ಹೆಚ್ಚಾಗಿವೆ.

ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರು ರಸ್ತೆ ಪರಿಶೀಲನೆ ನಡೆಸಿ ಅಭಿವೃದ್ಧಿ ಪಡಿಸುವಂತೆ ಜನ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

30/10/2021 05:22 pm

Cinque Terre

45.06 K

Cinque Terre

0

ಸಂಬಂಧಿತ ಸುದ್ದಿ