ಕುಂದಗೋಳ : ನಿತ್ಯದ ಬದುಕಿನಲ್ಲಿ ಬಹು ಅವಶ್ಯವಾದ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಮತ್ತು ಅಡುಗೆ ಎಣ್ಣೆ ಬೆಲೆ ದಿನದಿಂದ ದಿನಕ್ಕೆ ಶರವೇಗದಲ್ಲಿ ತನ್ನ ಮೊತ್ತದಲ್ಲಿ ಏರಿಕೆ ಕಾಣುತ್ತಲೇ ಇದೆ.
ಈ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಮಧ್ಯಮ ಮತ್ತು ಬಡವರ್ಗದವರ ಜೀವನ ಕಷ್ಟದ ಹಾದಿ ಹಿಡಿದಿದ್ದು ದುಡಿಮೆ ಮಾಡಿದ ಅರ್ಧದಷ್ಟು ಹಣವನ್ನು ವಾಹನಕ್ಕೆ ಇಂಧನ ಹಾಕಿಸಲು, ಗ್ಯಾಸ್ ಸಿಲಿಂಡರ್ ಖರೀದಿಸಲು ಮೀಸಲಿಡಬೇಕಾದ ಅನಿವಾರ್ಯ ಎದುರಾಗಿದೆ.
ಈ ಬಗ್ಗೆ ಕುಂದಗೋಳ ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಹಂಚಿಕೊಂಡ ಅಭಿಪ್ರಾಯ ಹೀಗಿದೆ ನೋಡಿ..
ಒಟ್ಟಾರೆಯಲ್ಲಿ ಇಂಧನ ಬೆಲೆ ಏರಿಕೆ ಪರಿಣಾಮ ಪ್ರತಿಯೊಂದು ಕ್ಷೇತ್ರವೂ ತನ್ನ ದರದಲ್ಲಿ ಬದಲಾವಣೆ ಕಾಣುತ್ತಲಿದ್ದು ಜನರ ಬದುಕು ಆತಂಕಕ್ಕೆ ಸಿಲುಕಿದೆ.
Kshetra Samachara
22/10/2021 06:33 pm