ನವಲಗುಂದ : ನಮ್ಮ ಜನರಿಗೆ ಸಮಸ್ಯೆ ಇದೇ ಅಂತಾ ಗೊತ್ತಿದ್ರೂ ಸಹ ಸುಮ್ನೆ ಕೂತ್ಕೋತಾರೆ. ನಮಗ್ಯಾಕ್ ಬೇಕು ಬಿಡೋ ಮಾರಾಯ ಅನ್ನೋ ಹಾಗೆ, ಹೀಗೆ ಕೂರೋದ್ರಿಂದ ಸಮಸ್ಯೆ ಬಗೆ ಹರಿಯುತ್ತೆ ಅನ್ನೋದು ಮಾತ್ರ ಭ್ರಮೆ ಅಷ್ಟೇ, ಇದೆಲ್ಲಾ ಯಾಕೆ ಹೇಳ್ತಿದೀವಿ ಅಂತೀರಾ ಈ ಸ್ಟೋರಿ ನೋಡಿ...
ಇದು ನವಲಗುಂದ ಪಟ್ಟಣದ ಸಿದ್ದಾಪುರ ಓಣಿ ಅಂತ್ರಿ, ಇಲ್ಲಿ ಹಂದಿಗಳ ರಾಜ್ಯಭಾರನ ನಡೀತೇತಿ, ಮನಿ ಮುಂದ ಹಾಕೋ ಕಾಳು ಕಡಿ ತಿನ್ನೋದ್ರಿಂದ ಹಿಡಿದು, ಮನಿ ಒಳಗ ನುಗ್ಗಿ ಬರುವಷ್ಟ ಸ್ವಾತಂತ್ರ್ಯ ಇಲ್ಲಿನ ನಿವಾಸಿಗಳು ಹಂದಿಗಳಿಗೆ ಕೊಟ್ಟಾರ್ರಿ, ಹಿಂಗೆಲ್ಲಾ ಯಾಕ ಅಣ್ಣಾತಾರ ಅಂತಿರೆನ್ರಿ, ಮತ್ ಏನ್ರಿ ಇಷ್ಟೆಲ್ಲಾ ತ್ರಾಸ್ ಕೊಡ್ತಿರೋ ಹಂದಿಗಳ ಸಮಸ್ಯೆನಾ ಪುರಸಭೆ ಅಧಿಕಾರಿಗಳಿಗೆ ಹೇಳಿರೆನ್ ಅಂದ್ರ ಇಲ್ಲಾ ಅಂತಾರ, ನಾವ್ ಹೇಳ್ತಿವಿ ನಿಮ್ಮ ಸಮಸ್ಯೆ ಹೇಳ್ರಿ ನಮ್ಮ ಮುಂದ ಅಂದ್ರ ಅದಕ್ಕೂ ಮುಂದ ಬರಲ್ಲಾ ಅಂತಾರಿ, ಹಿಂಗ್ ಆದ್ರ ಸಮಸ್ಯೆ ಹೆಂಗ ಬಗಿಹರಿಬೇಕ್ ಹೇಳ್ರಿ, ಅಷ್ಟ ಅಲ್ದ ಈ ಹಂದಿಗಳಿಂದ ಇಲ್ಲಿ ಸಾಂಕ್ರಮಿಕ ರೋಗದ ಭೀತಿ ಕೂಡ ಆಗೋ ಹಂಗ್ ಕಾಣಾತೇತಿ ನೋಡ್ರಿ, ಅದೇನೇ ಆಗ್ಲಿ ಇದನ್ನ ಪುರಸಭೆ ಅಧಿಕಾರಿಗಳಾದ್ರೂ ಸ್ವಲ್ಪ ಗಮನ ಹರಿಸಿ, ಹಂದಿಗಳನ್ನ ಬೇರೆ ಕಡೆ ಬಿಟ್ಟು ಬರುವ ವ್ಯವಸ್ಥೆ ಮಾಡಬೇಕಿದೆ ನೋಡ್ರಿ, ಆವಾಗ್ಲೇ ಇಲ್ಲಿನ ಜನರು ನೆಮ್ಮದಿಯಿಂದ ಇರಾಕ್ ಸಾಧ್ಯ ಆಕೇತಿ...
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
20/10/2021 09:56 am