ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಸುತ್ತ ಹಳ್ಳಿಯ ರೈತರು ತಲುಪಬೇಕಾದ್ರೇ ಅಂಗೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಸಂಶಿ ರೈತ ಸಂಪರ್ಕ ಕೇಂದ್ರದ ಎದುರಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು, ಹಿಂಗಾರು ಬಿತ್ತನೆ ಬೀಜ ಖರೀದಿಗೆ ಬಂದ ರೈತರು ಬೀಜ ಪಡೆದು ಅಂಗೈಯಲ್ಲಿ ಜೀವ ಹಿಡಿದು ಈ ಕೆಸರು ದಾಟಿ ರಸ್ತೆ ತಲುಪುಬೇಕು ಹೀಗೆ ದಾಟುವಾಗ ಬಿದ್ದು ಎದ್ದು ಹೋದ ರೈತರಿಗೇನು ಕಡಿಮೆಯಿಲ್ಲಾ. ಇನ್ನೂ ಸ್ಥಳೀಯ ನಿವಾಸಿಗಳು ಇಲ್ಲಿನ ದುರ್ನಾತ ತಾಳಲಾರದೆ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ಮೊನ್ನೆ ತಾನೇ ಈ ಹಿಂಗಾರು ಬೀಜ ವಿತರಣೆಗೆ ರೈತ ಸಂಪರ್ಕ ಕೇಂದ್ರಕ್ಕೆ ಬಂದ ಶಾಸಕಿ ಕುಸುಮಾವತಿ ಶಿವಳ್ಳಿ ಕೆಸರಿನ ರಸ್ತೆಗೆ ಮಣ್ಣು ಹಾಕಿ ಸರಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ರೂ, ಆ ಕೆಲಸ ಇಂದಿಗೂ ನಡೆದಿಲ್ಲಾ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡೆಸಿಕೊಂಡಿಲ್ಲಾ.
ಈ ಬಗ್ಗೆ ರೈತರ ಕಷ್ಟ ಮನಗಂಡು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಿಡಿ ಮಣ್ಣು ಹಾಕಿ ಕೆಸರು ತುಂಬಿದ ರಸ್ತೆ ಸರಿಪಡಿಸಬೇಕಾಗಿದೆ.
Kshetra Samachara
18/10/2021 05:54 pm