ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಡ್ಜ್ ಕಾಲೋನಿಗೇನೆ ಇಲ್ಲ ನೀರು

ಹುಬ್ಬಳ್ಳಿ: ಅಮರಗೋಳ ಜಡ್ಜ್ ಕಾಲೋನಿಗೇನೆ ಇಲ್ಲ ನೀರು. ಕಳೆದ 20 ದಿನಗಳಿಂದ ತತ್ತರಿಸಿ ಹೋಗಿದ್ದಾರೆ ಕೆ.ಎಚ್.ಬಿಯ ಜಡ್ಜ್ ಕಾಲೋನಿ ಜನ. ನೀರಿಗಾಗಿ ಪರದಾಡಿ ಕೊನೆಗೆ 3 ದಿನಕ್ಕೊಮ್ಮೆ ದುಡ್ಡುಕೊಟ್ಟು ಟ್ಯಾಂಕರ್ ಹಾಕಿಸಿಕೊಳ್ಳುವ ಸ್ಥಿತಿಗೆ ಬಂದಿದೆ ಇಲ್ಲಿಯ ಜನರ ಪರಿಸ್ಥಿತಿ.

ಅಮರಗೋಳದ ಜಡ್ಜ್ ಕಾಲೋನಿಯಲ್ಲಿ ಜಡ್ಜ್ ಗಳ ಮನೆಗಳು ಸೇರಿ 350 ಕ್ಕೂ ಹೆಚ್ಚು ಕೆ.ಎಚ್.ಬಿ ಮನೆಗಳಿವೆ. ಈ ಮನೆಗಳಿಗೆ ಮಲಪ್ರಭಾ ನದಿಯಿಂದ ಬರೋ ನೀರೆ ಜೀವ ಜಲ. ಇಲ್ಲಿರೋ 10 ಲಕ್ಷ ಕ್ಯೂಸೆಕ್ಸ್ ಅಷ್ಟು ನೀರು ಸಂಗ್ರಹಿಸೋ ಅಂಡರ್ ಗ್ರೌಂಡ್ ಟ್ಯಾಂಕ್ ಇದೆ. 5 ಲಕ್ಷ ಕ್ಯೂಸೆಕ್ಸ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಕೂಡ ಇದೆ. ಆದರೆ ಸಮರ್ಪಕ ನೀರೆ ಇಲ್ಲಿ ಸರಬರಾಜು ಆಗೋದಿಲ್ಲ.

ಕಳೆದ 20 ದಿನದಿಂದ ಇಲ್ಲಿಯ ಜನ ನೀರಿಗಾಗಿ ಕಾಯುತ್ತಲೇ ಇದ್ದಾರೆ. ಆದರೆ, ನೀರು ಸರಬರಾಜು ಆಗಿಯೇ ಇಲ್ಲ. ಪರ್ಯಾಯವಾಗಿ ಟ್ಯಾಂಕರ್ ನೀರನ್ನೆ ಅವಲಂಬಿಸಿದ್ದಾರೆ. ಮಲಪ್ರಭಾ ನದಿಯ ನೀರು ಪ್ರತಿ ಟ್ಯಾಂಕರ್ ಗೆ 700 ರೂ.ಅಮರಗೋಳದ ಬೋರ್ ವೆಲ್ ನೀರಿಗೆ 500 ರೂಪಾಯಿ,ಕೆ.ಎಚ್.ಬಿ.ಸ್ಥಳೀಯ ಬೋರ್ ವೆಲ್ ನೀರಿಗೆ 300 ರೂ. ಹೀಗೆ ಅವರ ಅನುಕೂಲಕ್ಕೆ ತಕ್ಕಂತೆ ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಸಮಸ್ಯೆ ತಿಳಿದಿರೋ ವಾಲ್ ಮ್ಯಾನ್ ಬಸವರಾಜ್ ಏನು ಹೇಳುತ್ತಾರೆ ನೋಡಿ.

ಕೆ.ಎಚ್.ಬಿ.ಕಾಲೋನಿಯ ಜನರ ನೀರಿನ ಸಮಸ್ಯೆ ಸ್ಥಳೀಯ ಶಾಸಕರ ಗಮನಕ್ಕೂ ಬಂದಿದೆ. ಆದರೆ ಅವರು ಮಾತು ಕಾರ್ಯರೂಪಕ್ಕೆ ಬರದೆ ಭರವಸೆಯಾಗಿಯೇ ಉಳಿದಿದೆ.

-ರೇವನ್ ಪಿ.ಜೇವೂರ್ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

17/10/2021 04:21 pm

Cinque Terre

40.99 K

Cinque Terre

1

ಸಂಬಂಧಿತ ಸುದ್ದಿ