ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬೋಳ್ಳಿ ಯಲ್ಲಿ ಗ್ರಾಮ ವಾಸ್ತವ್ಯ : ಹಗಲಿಗಷ್ಟೇ ಸೀಮಿತಗೊಂಡ ಕಾರ್ಯಕ್ರಮ

ಅಳ್ನಾವರ: ತಾಲೂಕಿನ ಅಂಬೋಳ್ಳಿ ಗ್ರಾಮದಲ್ಲಿ 'ಗ್ರಾಮ ವಾಸ್ತವ್ಯ' ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮದ ಪ್ರಮುಖ ರೂವಾರಿ ಯಾಗಿದ್ದ ಪ್ರೊಬೆಷನರಿ ತಹಶೀಲ್ದಾರ್ ಮಾಧವ ಗಿತ್ತೆ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜರುಗಿತು.

ಗ್ರಾಮ ವಾಸ್ತವ್ಯ ದ ಪರಿಕಲ್ಪನೆ, ಉದ್ದೇಶ ವೆಂದರೆ ತಾಲೂಕಿಗೆ ಒಳಪಡುವ ಎಲ್ಲ ಅಧಿಕಾರಿಗಳನ್ನ ಗ್ರಾಮಕ್ಕೆ ಕರೆತಂದು,ಗ್ರಾಮದಲ್ಲಿರುವ ಕುಂದು ಕೊರತೆಗಳನ್ನ,ಜನರ ಕಷ್ಟಗಳನ್ನ ಗ್ರಾಮದ ಅಭಿವೃದ್ಧಿ ಇದೆಲ್ಲವನ್ನು ಬೆಳಿಗ್ಗೆಯಿಂದ ಸಂಜೆವರೆಗೂ ಚರ್ಚಿಸಿ,ಸಮಸ್ಯೆಗಳನ್ನ ಸಾಧ್ಯವಾದಷ್ಟು ಅಲ್ಲೇ ಬಗೆ ಹರಿಸಿ ಗ್ರಾಮದಲ್ಲೇ ವಾಸ್ತವ್ಯ ಮಾಡಿ ಬಂದ ಅರ್ಜಿಗಳನ್ನ ವಿಲೇವಾರಿ ಮಾಡಿ ಕ್ರಮ ಕೈಗೊಳ್ಳುವುದು.

ಆದರೆ ನಿನ್ನೆ ನಡೆದ ಗ್ರಾಮ ವಾಸ್ತವ್ಯ ಕೇವಲ ಹೆಸರಿಗಷ್ಟೇ ಸೀಮಿತಗೊಂಡಿತ್ತು.ಮಾನ್ಯ ಕರ್ನಾಟಕ ಸರಕಾರದ ಸುತ್ತೋಲೆ ಪ್ರಕಾರ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಹಾಜರು ಇರಬೇಕಿತ್ತು.ಆದರೆ ಇಲ್ಲಿ ತಹಶೀಲ್ದಾರ್ ಮತ್ತು ಹಲವು ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಹಾಜರಿದ್ದರು.

ಗ್ರಾಮಸ್ಥರು ತಹಶೀಲ್ದಾರ್ ರವರಿಗೆ ಪಟಗ ತೊಡಿಸಿ ಬಾಳೆ ಗೊನೆ ಇಂದ ಅಲಂಕೃತಗೊಂಡ ಜಕ್ಕಡಿ ಮೇಲೆ ಅದ್ದೂರಿ ಇಂದ ಸ್ವಾಗತಿಸಿದರು.ಒಂದೆರಡು ಬೀದಿ ಗಳನ್ನು ಜಕ್ಕಡಿ ಮೇಲೆ ವೀಕ್ಷಿಸಿದ ತಹಶೀಲ್ದಾರ್ ರವರು ಶಾಲೆಯ ಆವರಣದಲ್ಲಿ ಸಿದ್ಧಗೊಳಿಸಿದ್ದ ವೇದಿಕೆ ಮೇಲೆ ಆಸೀನರಾದರು.

ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ನಮ್ಮ ಗ್ರಾಮದಲ್ಲೇ ಉಳಿದುಕೊಂಡು ನಮ್ಮೆಲ್ಲಾ ಕುಂದು ಕೊರತೆ ಗಳನ್ನ,ನೋವುಗಳನ್ನ ದೂರ ಮಾಡುತ್ತಾರೆ ಎಂದು ಕೊಂಡಿದ್ದ ಗ್ರಾಮಸ್ಥರಿಗೆ ನಿರಾಸೆ ಆಗಿದ್ದು ಸತ್ಯ.ಹಲವು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಂಜೆ ವರೆಗೂ ಇದ್ದು,ತಮ್ಮ ಕಾರನ್ನು ಹತ್ತಿ ಹೊರಟು ಹೋದರು.

ಯಾವೊಂದು ಕೆಲಸ ಸ್ಥಳದಲ್ಲೇ ಬಗೆ ಹರಿಯದೆ ಇದ್ದದ್ದು ಗ್ರಾಮಸ್ಥರಲ್ಲಿ ಕೊಂಚ ನಿರಾಸೆ ಉಂಟುಮಾಡಿತು.

ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Nirmala Aralikatti
Kshetra Samachara

Kshetra Samachara

17/10/2021 10:31 am

Cinque Terre

26.16 K

Cinque Terre

0

ಸಂಬಂಧಿತ ಸುದ್ದಿ