ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವಿದ್ಯಾರ್ಥಿಗಳ ಗೋಳು ಕೇಳೋರು ಯಾರು..?

ನವಲಗುಂದ : ರಸ್ತೆ ಸಂಪೂರ್ಣ ಕೆಸರುಮಯ, ಎಲ್ಲಿ ಬೀಳ್ತಿವೋ ಏನೋ ಅಂತಾ ಭಯದಿಂದ ಸಂಚರಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳು, ಇನ್ನು ಈ ಕೆಸರಿನಲ್ಲಿ ಎಲ್ಲಿ ಬೈಕ್ ಸ್ಕಿಡ್ ಆಗಿ ಬಿಳ್ಳುತ್ತೋ ಅನ್ನೋ ಭಯದಲ್ಲೇ ವಾಹನ ಚಲಾಯಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಇದೆಲ್ಲಾ ಕಂಡು ಬಂದದ್ದು ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕಿಸುವ ರಸ್ತೆಯಲ್ಲಿ..

ನವಲಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಈಗ ಆತಂಕ ಮನೆ ಮಾಡಿದಂತಾಗಿದೆ. ಮಳೆಗಾಲದಲ್ಲಿ ಕಾಲೇಜಿಗೆ ಹೋಗಬೇಕು ಅಥವಾ ಬರಬೇಕು ಅಂದ್ರೆ ಇದೆ ಕೆಸರಿನ ರಸ್ತೆ ಮೇಲೆ ಹಾದು ಹೋಗಬೇಕಾದ ಅನಿವಾರ್ಯತೆ ಇದೆ. ದ್ವಿಚಕ್ರ ವಾಹನ ಸವಾರರು ಕೂಡ ಇಲ್ಲಿ ಸಂಚರಿಸೋದು ಕಷ್ಟವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ಸಂಬಂಧ ಪಟ್ಟ ಯಾವ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿಯಾಗಿವೆ. ಇನ್ನು ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಂಡು ಇಲ್ಲಿ ಸುಸರ್ಜಿತ ರಸ್ತೆ ನಿರ್ಮಾಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By :
Kshetra Samachara

Kshetra Samachara

10/10/2021 08:26 pm

Cinque Terre

54.9 K

Cinque Terre

3

ಸಂಬಂಧಿತ ಸುದ್ದಿ