ನವಲಗುಂದ : ಬಸ್ಸು ನಿಲ್ದಾಣದೊಳಗೆ ಪ್ರವೇಶ ಆಗೋದೇ ತಡ, ನಾ ಮುಂದು ತಾ ಮುಂದು ಅಂತಾ ವಿದ್ಯಾರ್ಥಿಗಳಿಂದ ಸಾರ್ವಜನಿಕರವರೆಗೆ ಎಲ್ಲರೂ ಬಸ್ ಗೆ ಮುಗಿಬಿದ್ದ ದೃಶ್ಯಗಳು ಇಂದು ಮಧ್ಯಾಹ್ನ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಂಡು ಬಂದವು.
ಹೌದು ತಾಲೂಕಿನ ಮೊರಬ ಗ್ರಾಮಕ್ಕೆ ತೆರಳುವ ಬಸ್ ಗೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಗಂಟೆ ಗಟ್ಟಲೆ ಕಾಯುತ್ತಾ ಕುಳಿತಿದ್ರು ಅನ್ನೋದಕ್ಕೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಸ್ ಗೆ ಮುಗಿಬಿದ್ದ ಪ್ರಯಾಣಿಕರೇ ಸಾಕ್ಷಿ, ಜನರು, ವೃದ್ಧರು ಮತ್ತು ವಿದ್ಯಾರ್ಥಿಗಳು ಒಂದೇ ಸಮನೆ ಬಸ್ ಬರುತ್ತಲೇ ಬಸ್ ಗೆ ಮುಗಿಬಿದಿದ್ದರು. ಈ ವೇಳೆ ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು ಎಂಬುದು ನಿಜಕ್ಕೂ ಆತಂಕಕ್ಕೆ ಈಡು ಮಾಡುತ್ತೆ, ಕೂಡಲೇ ನವಲಗುಂದ ಡಿಪೋ ವ್ಯವಸ್ಥಾಪಕರು ಇತ್ತ ಗಮನ ಹರಿಸಿ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿ, ಹೆಚ್ಚುವರಿ ಬಸ್ ನ ವ್ಯವಸ್ಥೆ ಮಾಡಬೇಕಿದೆ.
Kshetra Samachara
22/09/2021 09:27 pm