ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಕುಂದಗೋಳ : ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿಯನ್ನು ಎಲ್ಲರೂ ಕೇಳಿರುತ್ತೇವೆ ಆದರೆ ಈ ನಾಣ್ಣುಡಿ ಕುಂದಗೋಳ ತಾಲೂಕನ್ಯಾಗ ಸುಳ್ಳು ಆಗೇತಿ.
ಇಲ್ಲಿ ಹೆಣ್ಣು ಶಾಲಿ ಕಾಲೇಜು ಕಲ್ಯಾಕ್ ಯಾರ್ ಯಾರ್ದೋ ಬೈಕ್ ಕಾರಿಗೆ ಕೈ ಮಾಡಿ ಲಿಫ್ಟ್ ಕೇಳಿ ಬರ್ಬೇಕು ಅಂತಹ ಕೆಟ್ಟ ಸಾರಿಗೆ ವ್ಯವಸ್ಥೆ ಇಲೈತಿ..
ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ಯಾವಾಗ ಬಿದೈತಿ ನೋಡ್ರಿ ಅವಾಗಿಂದ ಈ ಬ್ರಿಡ್ಜ್ ಮೇಲೆ ಬಸ್ ಓಡಂಗಿಲ್ಲಾ, ಆದ್ರ ಕಾರು, ಬೈಕು, ಟಾಟಾಎಸ್ ಮತ್ತ ಬ್ಯಾರೆ ಬ್ಯಾರೆ ಗಾಡಿ ಪದ್ಧತ್ ಸೀರ್ ಓಡಾಡತವ್, ಆದ್ರ ಸಾರಿಗೆ ಬಸ್ ಅಷ್ಟ ಓಡಾಡುಂಗಿಲ್ಲ.
ಇರದ ಪರಿಣಾಮ ಈ ಹೆಣ್ಣು ಮಕ್ಕಳು ಈ ಪಾಟಿ ಗೊತ್ತು ಗುರಿ ಇಲ್ಲದಿರೋ ಖಾಸಗಿ ವಾಹನ ಸವಾರರಿಗೆ ಕೈ ಮಾಡಿ ಊರು ಸೇರ್ಬೇಕು ಚೇ...ಚೇ...
ಮಾನ್ಯ ಜಿಲ್ಲಾಧಿಕಾರಿಗಳೇ, ಕೇಂದ್ರ ಸಚಿವರೇ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೆಲಕ್ಕ ಬಿದ್ದಂತಹ ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ಕಾಮಗಾರಿ ಆರಂಭ ಮಾಡಸಿದ್ರೀ ಆದ್ರ ಹಳ್ಳಿಗಳಿಗೆ ಬಸ್ ಅಡ್ಯಾಡಾಕ ಬೇರೆ ದಾರಿ ಎಲೈತಿ ?, ಈ ಬಡ ರೈತರು ಮಕ್ಕಳು ಪ್ರಯಾಣ ಮಾಡೋದು ಹ್ಯಾಂಗ್ ? ಪಾಪಾ ದಿನ ನಿತ್ಯ ಮಳೆ ಬಿಸಿಲು ನೋಡದಂಗ ರಸ್ತೆ ಕಾಯೋ ವೃದ್ಧರು, ಅಂಗವಿಕಲರು, ಮಹಿಳೆಯರು ವಿಶೇಷವಾಗಿ ವಿದ್ಯಾರ್ಥಿನಿಯರ ಪಾಡಿಗೆ ಏನೈತ್ರಿ ಪರಿಹಾರ ?
ಕೇಳಿದ್ರಲ್ಲಾ ಬಸ್ಸಿಲ್ಲದ ವಿದ್ಯಾರ್ಥಿನಿಯರ ಪಾಡನ್ನು, ಇದೇನೋ ಬ್ರಿಡ್ಜೋ ಅಥವಾ ಅಂಡಮಾನ್ ನಿಕೋಬಾರ್ ದ್ವಿಪವೋ ಈ ಆಧುನಿಕ ಯುಗದಾಗ ಆ ಕಡೆ ಒಂದು ಬಸ್ ಇಳಿಸೋದು, ಈ ಕಡೆ ಓಡ್ಹೋಡಿ ಹೋಗಿ ಇನ್ನೋಂದು ಬಸ್ ಏರೋದು ಇದ ನಿಮಗ ಸರಿ ಕಾಣಾಕತೈತೇನ್ರಿ…ಮೊದ್ಲ ಈ ಎಲ್ಲಾ ಸಮಸ್ಯೆಗೆ ಒಂದು ಪರಿಹಾರ ಕೊಡ್ರಿ…
Kshetra Samachara
22/09/2021 05:49 pm