ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಾಸಕರ ಅನುದಾನದಲ್ಲಿ ಗ್ರಂಥಾಲಯಕ್ಕಾಗಿ ವಕೀಲರ ಮನವಿ

ಕುಂದಗೋಳ : ತಾಲೂಕಿನ ಶಾಸಕಿ ಕುಸುಮಾವತಿ ಶಿವಳ್ಳಿ ಅವರನ್ನು ಪಟ್ಟಣದ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಶಾಸಕರ ಅನುದಾನದಲ್ಲಿ ಕುಂದಗೋಳ ತಾಲೂಕಿನ ವಕೀಲರಿಗಾಗಿ ಗ್ರಂಥಾಲಯ ಪಿಠೋಪಕರಣ ವ್ಯವಸ್ಥೆ ಮಾಡುವಂತೆ ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ಸೊರಟೂರು ಮನವಿ ಮಾಡಿದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕಿ ಕುಸುಮಾವತಿ ಮುಂಬರುವ ದಿನಗಳಲ್ಲಿ ಖಂಡಿತವಾಗಿ ಶಾಸಕರ ಅನುದಾನದಲ್ಲಿ ತಮಗೆ ಗ್ರಂಥಾಲಯ ಮತ್ತು ಪಿಠೋಪಕರಣದ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು ವಕೀಲರ ಸಂಘದಿಂದ ಸನ್ಮಾನಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಕುಂದಗೋಳ ಪಟ್ಟಣದ ವಕೀಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/09/2021 01:30 pm

Cinque Terre

14.97 K

Cinque Terre

0

ಸಂಬಂಧಿತ ಸುದ್ದಿ