ಅಣ್ಣಿಗೇರಿ : ಮುಂಬರಲಿರುವ ಹಿಂದೂ ಧಾರ್ಮಿಕ ಹಬ್ಬವಾದ ಗಣೇಶ ಹಬ್ಬವನ್ನು ಸರಳ ಹಾಗೂ ಸರ್ಕಾರದ ಸೂಚನೆಯಂತೆ ಆಚರಣೆ ಮಾಡಬೇಕು ಎಂದು ಪಿಎಸ್ಐ ಲಾಲಸಾಬ ಜೂಲಕಟ್ಟಿ ಹೇಳಿದರು. ಸರ್ಕಾರ ಈ ಭಾರಿ ಗಣೇಶ ಹಬ್ಬಕ್ಕೆ ಮೆರವಣಿಗೆ, ಸಭೆ ಸಮಾರಂಭ, ಡಿಜೆ ಸೌಂಡ ಹಾಗೂ ಅನ್ನಸಂತರ್ಪಣೆಯನ್ನು ನಿಷೇಧ ಮಾಡಿದೆ.
ಪಟ್ಟಣ ಹಾಗೂ ತಾಲೂಕಿನಾಧ್ಯಂತ ಸಾರ್ವಜನಿಕ ಸ್ಥಳದಲ್ಲಿ 5 ದಿನ ಮಾತ್ರ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಕೋವಿಡ್ ನಿಯಂತ್ರಣ ಮಾಡಲು ನಮ್ಮ ನಿಮ್ಮೆಲ್ಲರ ಸಹಾಯ ಸಹಕಾರ ಅತ್ಯಗತ್ಯವಾಗಿದೆ ಎಂದರು. ಸಿಪಿಐ ಚಂದ್ರಶೇಖರ ಮಠಪತಿ ಮಾತನಾಡಿ, ಈ ಭಾರಿ ಸರ್ಕಾರ ಗಣೇಶ ಹಬ್ಬ ಆಚರಣೆಗೆ ಕೆಲವೊಂದು ನಿಯಮಗಳನ್ನು ಹೊರಡಿಸಿದೆ.
ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವದರೊಂದಿಗೆ ಹಬ್ಬ ಆಚರಣೆ ಮಾಡಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದರು. ತಹಶೀಲ್ದಾರ ಮಂಜುನಾಥ ಅಮಾಸಿ, ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ ಇತರರು ಉಪಸ್ಥಿತರಿದ್ದರು.
Kshetra Samachara
08/09/2021 03:23 pm