ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ಲೈ ಓವರ್ ಕಾಮಗಾರಿ ಆರಂಭ! ಪರದಾಡುತ್ತಿದ್ದಾರೆ ಪ್ರಯಾಣಿಕರು

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಮಹತ್ವ ಪೂರ್ಣವಾದ ಪ್ಲೈ ಓವರ್ ಕಾಮಗಾರಿಯನ್ನು, ಈಗಾಗಲೇ ಪ್ರಾರಂಭ ಮಾಡಿದ್ದು, ಸಧ್ಯ ಈ ಕೆಲಸದಿಂದ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ.

ಪ್ಲೈ ಓವರ್ ನಿರ್ವಹಣ ವಿನ್ಯಾಸ ಅಂತಿಮಗೊಂಡ ಬೆನ್ನಲ್ಲೇ, ಹುಬ್ಬಳ್ಳಿಯ ಗೋಕುಲ ರಸ್ತೆಯ ವಾಣಿ ವಿಲಾಸ ವೃತ್ತದ ಬಳಿ ಪ್ಲೈಓವರ್ ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ಪ್ರಯಾಣಿಕರಿಗೆ ಅಡಚಣೆ ಆಗುತ್ತದೆಯೋ ಇಲ್ಲವೊ ಎಂಬ ಪರಿಜ್ಞಾನ ಇಲ್ಲದೆ ಕಾಮಗಾರಿಯನ್ನು ಶುರುಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಹುಬ್ಬಳ್ಳಿ ಜನರು ಪ್ರಶ್ನೆಯಾಗಿದೆ.

ಪ್ಲೈ ಓವರ್ ನ್ನು ಮೊದಲಿಗೆ ಸುಮಾರು 150 ಮೀಟರ್ ಉದ್ದದ ಮಾರ್ಗದಲ್ಲಿ ನಿರ್ಮಾಣದ ಯೋಜನೆ ಹಮ್ಮಿಕೊಂಡಿರುವ ಗುತ್ತಿಗೆ ಸಂಸ್ಥೆ, ಈ ಕಾಮಗಾರಿಯನ್ನು ಹು-ಧಾ ಪೊಲೀಸ ಇಲಾಖೆ, ಪಿಡಬ್ಲೂಡಿ ರಾಷ್ಟ್ರೀಯ ಹೆದ್ದಾರಿ ಘಟಕ ಹಾಗೂ ಜಂಡು ಕನಸ್ಟ್ರಕ್ಷನ್ ಇಂಡಿಯಾ ಪ್ರೈ.ಲಿ ಗುತ್ತಿಗೆ ಸಂಸ್ಥೆ ನಡೆಸುತ್ತಿವೆ. ಇದರಿಂದಾಗಿ ಟ್ರಾಫಿಕ್ ಪೊಲೀಸರಿಗೆ ಹೈರಾಣ ಆಗಿರುವುದು ಮಾತ್ರ ಸತ್ಯ.

ಈರಣ್ಣ ವಾಲಿಕಾರ,

ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

17/08/2021 02:17 pm

Cinque Terre

28.3 K

Cinque Terre

20

ಸಂಬಂಧಿತ ಸುದ್ದಿ