ಹುಬ್ಬಳ್ಳಿ: ಕಮ್ಮಗ ಇರೋ ರಸ್ತೆ ಕೆಡಿಸಿ ಜನರನ್ನ ಸದಾಕಾಲ ಸಂಕಷ್ಟದಲ್ಲಿ ಇಡೋ ಹುಬ್ಬಳ್ಳಿ-ಧಾರವಾಡ ಜನಪ್ರನಿಧಿಗಳಿಗೆ, ಅಧಿಕಾರಿಗಳಿಗೆ ದೊಡ್ಡ ನಮಸ್ಕಾರೀ.. ಅಂದಂಗ ಇದು ಹುಬ್ಬಳ್ಳಿ ರಾಣಿಚೆನ್ನಮ್ಮ ಸರ್ಕಲ್‌ನಿಂದ ಬೆಂಗಳೂರು-ಪುಣೆ ನ್ಯಾಷನಲ್ ಹೈವೇಗೆ ಕನೆಕ್ಟ್ ಮಾಡೋ ರಸ್ತೆಯಲ್ಲಿ ಬರೋ ಬಮ್ಮಾಪುರದ ದುಸ್ಥಿತಿ.
ಯಾರದರ ಬಡವರ ಜಲ್ಮ ಹ್ವಾದ ಮ್ಯಾಲೆ ಅಧಿಕಾರಿಗಳ ಎಚ್ಚರ ಆಗುವಂಗ ಕಾಣತೈತಿ. ಅಲ್ಲ ರೀ ಲಾಕ್‌ಡೌನ್ ಟೈಮ್‌ನ್ಯಾಗ ಈ ರಸ್ತೆಗೆ ಕಾಂಕ್ರೀಟ್ ಹಾಕಿ ಆಟೋಇಟೋ ಸೈ ಎನಿಸಿಕೊಂಡಿದ್ರಿ. ಅದರ ಹಿಂದ ಯಾರೋ ಬಂದು ರಸ್ತೆ ಅಗೆದು ಕೇಬಲ್ ಹಾಕಿಹ್ವಾದ್ರು. ಈಗ ನೋಡಿದ್ರ ರಸ್ತೆ ಮ್ಯಾಲೆ ಕಬ್ಬಿಣದ ರಾಡ್ ಎದ್ದುನಿಂತ ಜೀವ ಬೇಡಾಕುಂತವು. ಇನ್ನ ಚರಂಡಿ ಬಗ್ಗೆ ಮಾತಾಡೋದೆ ಬೇಡ. ಸಣ್ಣ ಮಳೆಯಾದ್ರೂ ಚರಂಡಿ ಯಾವುದು ರಸ್ತೆ ಯಾವುದು ಅಂತ ಫುಲ್ ಕಂಫ್ಯೂಸ್ ಆಗತ್ತ.
ಇನ್ನ ಈ ಜಾಗದಲ್ಲಿ ಇದ್ದ ಸ್ಟ್ರೀಟ್ ಲೈಟ್ ಮಂಗ ಮಾಯ ಆದ್ವು.. ಅದಕ್ಕೆ ನಾವು ಸಾಲು ಸಾಲು ಸಮಸ್ಯೆಗೆ ಜನರನ್ನು ತಳಿರುವ ಜನಪ್ರಿತಿಧಿಗಳು, ಅಧಿಕಾರಿಗಳಿಗೆ ದೊಡ್ಡ ಸಲಾಂ ಅಂದಿದ್ದ. ಸ್ಮಾರ್ಟ್ ಸಿಟಿ ಎಂಬ ಹಗಲ ಚುಕ್ಕಿ ತೋರಿಸ್ಗೊಂತ ಹೋಗ್ಬಾಡ್ರಿ ಎನ್ನುವುದು ಪಬ್ಲಿಕ್ ಆಗ್ರಹ.
ಇದು ಪಬ್ಲಿಕ್ ನೆಕ್ಸ್ಟ್ ವೀಕ್ಷಕ ವರದಿ.
Kshetra Samachara
05/08/2021 12:25 pm