ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಾಳಾದದ್ದು ಒಂದು ನೀರಿನ ಘಟಕ, ನೀರಿಲ್ಲದೆ ಕುಳಿತಿದ್ದು ನಾಲ್ಕು ಇಲಾಖೆ

ಕುಂದಗೋಳ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವಂತಹ ರೈತರ ದಾಹ ನೀಗಿಸಲೇಂದು ನಿರ್ಮಿಸಿದ ಸುಸಜ್ಜೀತ ಶುದ್ಧ ನೀರಿನ ಘಟಕ ಪೈಪ್ಲೈನ್ ದುರಸ್ತಿ ಭಾಗ್ಯ ಕಾಣದೆ ಅವ್ಯವಸ್ಥೆ ಹಾದಿ ಹಿಡಿದಿದ್ದು ರೈತರ ದಾಹಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೀರು ಸಿಗದಾಗಿದೆ.

ಕಳೆದ ಎರೆಡು ವರ್ಷದಿಂದ ಈ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಶುದ್ಧ ನೀರಿನ ಘಟಕ ಹಾಳಾಗಿ ಕ್ಲೋಸ್ ಆದ ಪರಿಣಾಮ ಕೃಷಿ ಮಾರುಕಟ್ಟೆ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕ ಕಚೇರಿ, ಆಂಚೇ ಕಚೇರಿ ಸೇರಿ ಅಗ್ನಿಶಾಮಕ ಠಾಣೆಯವರು ಸಹ ಎರೆಡು ಕಿಲೋಮೀಟರ್ ಮಾರ್ಗ ಕ್ರಮಿಸಿ ಕುಂದಗೋಳ ಪಟ್ಟಣ ತಲುಪಿ ನೀರನ್ನು ತೆಗೆದುಕೊಂಡು ಹೋಗುವ ಅನಿವಾರ್ಯ ದುಸ್ಥಿತಿ ಉಂಟಾಗಿದೆ.

ಇದಲ್ಲದೆ ಬೆಂಬಲ ಬೆಲೆ ಯೋಜನೆ ಹತ್ತಿ ಶೇಂಗಾ ಹೆಸರು ಖರೀದಿ ಇದ್ದಾಗಲೂ ಶುದ್ಧ ನೀರಿನ ಘಟಕ ದುರಸ್ತಿ ಕೈಗೊಳ್ಳದ ಹಿನ್ನೆಲೆಯಲ್ಲಿ ಜನ ಕೃಷಿ ಮಾರುಕಟ್ಟೆಗೆ ಶಾಪ ಹಾಕುತ್ತಿದ್ದು, ಈ ಸಮಸ್ಯೆ ಬಗೆಗೆ ಮಾತನಾಡಿ ನಮಗೆ ಬ್ಯಾಸರ ಆತು ಶುದ್ಧ ನೀರಿನ ಘಟಕ ಚಾಲೂ ಆಗ್ತಾ ಇಲ್ಲಾ ಎನ್ನುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ನೀರಿನ ವ್ಯವಸ್ಥೆ ಸರಿಪಡಿಸಿ.

Edited By : Manjunath H D
Kshetra Samachara

Kshetra Samachara

31/07/2021 01:42 pm

Cinque Terre

27.7 K

Cinque Terre

0

ಸಂಬಂಧಿತ ಸುದ್ದಿ