ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾರಿಗೆ ಬಸ್ ಸೌಲಭ್ಯ ಹೆಚ್ಚಳಕ್ಕಾಗಿ ಗ್ರಾಮಸ್ಥರಿಂದ ಪ್ರತಿಭಟನೆ

ಕುಂದಗೋಳ : ಬಿಳೇಬಾಳ ಹಾಗೂ ದೇವನೂರು ಗ್ರಾಮದ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗ ಅರಸಿ ಕುಂದಗೋಳ ಮತ್ತು ಹುಬ್ಬಳ್ಳಿಗೆ ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಂದು ಕುಂದಗೋಳ ಬಸ್ ನಿಲ್ದಾಣದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಿದರು.

ದೇವನೂರು ಬೀಳೆಬಾಳ ಗ್ರಾಮಗಳಿಗೆ ಸೂಕ್ತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಾರ್ವಜನಿಕರು ಸಾರಿಗೆ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡು ನಿಮಗೆ ಮನವಿ ನೀಡಿ ಸಮಸ್ಯೆ ಗಮನಕ್ಕೆ ತಂದು ಸಾಕಾಗಿದೆ. ಮನವಿ ಮಾಡಿದ್ರೂ ಬಸ್ ವ್ಯವಸ್ಥೆ ಕಲ್ಪಿಸುತ್ತಿಲ್ಲ ದೇವನೂರು ಬಿಳೇಬಾಳ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಹೆಚ್ಚಿಸಿ ಎಂದು ಮನವಿ ಸಲ್ಲಿಸಿದರು.

ಈ ವೇಳೆ ಗ್ರಾಮಸ್ಥರ ಅಳಲಿನ ಬಗ್ಗೆ ಬಿಜೆಪಿ ಮುಖಂಡ ರವಿ ಪಾಟೀಲ, ಹಾಗೂ ಮಾಲತೇಶ ಶ್ಯಾಗೋಟಿ ಸಮಸ್ಯೆ ತಿಳಿಗೊಳಿಸಿ ಹೆಚ್ಚವರಿ ಬಸ್ ಸೌಲಭ್ಯ ಒದಗಿಸುವಂತೆ ಸಾರಿಗೆ ನಿರ್ವಾಹಕರಿಗೆ ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

25/02/2021 02:54 pm

Cinque Terre

25.61 K

Cinque Terre

0

ಸಂಬಂಧಿತ ಸುದ್ದಿ