ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾರ್ವಜನಿಕರ ಅನುಕೂಲತೆಗಾಗಿ ಪರಿಷ್ಕೃತ ನಿಲುಗಡೆ: ಸಾರಿಗೆ,ಪೊಲೀಸ್ ಇಲಾಖೆಯ ಮಹತ್ವದ ಕಾರ್ಯ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಅವಳಿನಗರದಲ್ಲಿ ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಬರುವ ಬದಲು ಬಸ್ ನಿಲ್ದಾಣಗಳೇ ಸಾರ್ವಜನಿಕರ ಅನುಕೂತೆಗೆ ತಕ್ಕಂತೆ ಪರಿಷ್ಕೃತ ನಿಲುಗಡೆ ನಿರ್ಮಾಣ ಮಾಡಲು ಹು-ಧಾ ನಗರ ಸಾರಿಗೆ ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪೋಲಿಸ್ ಹಾಗೂ ವಾ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ನಗರದ ಟ್ರಾಪಿಕ್ ಜಾಮ್ ತಡೆಗಟ್ಟುವಂತೆ ನೀಡಿದ ನಿರ್ದೇಶದನ್ವಯ ಪೋಲಿಸ್ ಇಲಾಖೆಯ ಪೋಲಿಸ್ ವೃತ್ತ ನೀರಿಕ್ಷಕರು ಹಾಗೂ ವಾ.ಕ.ರ.ಸಾ.ಸಂಸ್ಥೆಯ ಸಿಬ್ಬಂದಿಗಳು ಜಂಟಿಯಾಗಿ ಮಾರ್ಗ ಸಮೀಕ್ಷೆ ಮಾಡಿ ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಿಗ್ನಲ್ ಹತ್ತಿರದ ಕೆಲವು ನಿಲುಗಡೆಗಳನ್ನು ಸ್ಥಳಾಂತರಗೊಳಿಸಿದ್ದು, ಅದರನ್ವಯ ಈಗಾಗಲೇ ಪರಿಷ್ಕೃತ ನಿಲುಗಡೆ ಸ್ಥಳಗಳಲ್ಲಿ ಬೋರ್ಡ ಅಳವಡಿಸಲಾಗಿದೆ.

ಸಂಸ್ಥೆಯ ನಗರ ಸಾರಿಗೆ ವಾಹನಗಳು ಪರಿಷ್ಕರಿಸಿದ ನಿಲುಗಡೆಗಳಲ್ಲಿಯೇ ನಿಲ್ಲಲು ಸೂಚನೆಗಳನ್ನು ನೀಡಲಾಗಿದ್ದು ಸಾರ್ವಜನಿಕ ಪ್ರಯಾಣಿಕರು ಪರಿಷ್ಕೃತ ನಿಲುಗಡೆ ಸ್ಥಳಗಳಲ್ಲಿ ನಿಂತು ಸಹಕರಿಸಲು ಹಾಗೂ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಲು ವಿನಂತಿಸಿಕೊಂಡಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್,ಹುಬ್ಬಳ್ಳಿಯಿಂದ ಕುಸುಗಲ್,ಕೇಶ್ವಾಪುರ ಸರ್ಕಲ್, ಹುಬ್ಬಳ್ಳಿಯಿಂದ ಗದಗ,ರೈಲ್ವೇ ನಿಲ್ದಾಣದ ಹತ್ತಿರ ಗದಗ ರೋಡ ನಿಲುಗಡೆ,ನ್ಯೂ ಇಂಗ್ಲೀಷ ಸ್ಕೂಲ್‍ನಿಂದ ಹಳೇ ಹುಬ್ಬಳ್ಳಿ ಹೋಗುವ ರಸ್ತೆ ಹಳೇ ಹುಬ್ಬಳ್ಳಿ ನಿಲುಗಡೆ ಸರ್ಕಲ್ ಹೀಗೆ ಹುಬ್ಬಳ್ಳಿಯಲ್ಲಿಯೇ 28 ಪರಿಷ್ಕೃತ ನಿಲುಗಡೆಯನ್ನು ಗುರುತಿಸಲಾಗಿದ್ದು,ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡುವ ಹಾಗೂ ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

Edited By : Manjunath H D
Kshetra Samachara

Kshetra Samachara

24/02/2021 07:50 pm

Cinque Terre

73.64 K

Cinque Terre

14

ಸಂಬಂಧಿತ ಸುದ್ದಿ