ಕುಂದಗೋಳ : ಮಳೆ ಪ್ರವಾಹ ಬಂದರೆ ಸಾರ್ವಜನಿಕರು ಸುರಕ್ಷಿತವಾಗಿ ಊರು ತಲುಪಲು ಬೆಣ್ಣೆ ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಿದ ಸೇತುವೆಗಳಿಂದಲೇ ಈಗ ಜನರಿಗೆ ಅಪಾಯದ ಭೀತಿ ಎದುರಾಗಿದ್ದು ನಿತ್ಯ ವಾಹನ ಸವಾರರು ಸಂಚಾರ ಭಯದಲ್ಲಿದೆ.
ಈ ಕುಂದಗೋಳ ತಾಲೂಕಿನ ಗ್ರಾಮಗಳಿಗೆ ಹೊಂದಿಕೊಂಡು ಹರಿಯುವ ಬೆಣ್ಣೆ ಹಳ್ಳಕ್ಕೆ ಅಡ್ಡವಾಗಿ ಕಟ್ಟಿದ ಬಹುತೇಕ ಸೇತುವೆಗಳು ಸುರಕ್ಷಿತವಾಗಿಲ್ಲ, ಈ ಸಾಲಿಗೆ ಮುಳ್ಳೊಳ್ಳಿ ಗ್ರಾಮದಿಂದ ಯರಗುಪ್ಪಿಗೆ ಸಂಪರ್ಕ ಕಲ್ಪಿಸುವ ಒಂದು ಕಿ.ಮೀ ರಸ್ತೆ ಹಾಗೂ ಬ್ರೀಡ್ಜ್ ಅಪಾಯಕ್ಕೆ ಕಾಯ್ದಿದೆ.
ಇಲ್ನೋಡಿ, ಈ ರಸ್ತೆ ತುಂಬಾ ಕಲ್ಲುಗಳು ಎದ್ದು ರಸ್ತೆ ಹಾಳಾಗಿ ವಾಹನಗಳ ಸಂಚಾರಕ್ಕೆ ಮಾರಕವಾದ್ರೇ, ಈ ಬ್ರೀಡ್ಜ್ ತಡೆಗೋಡೆ ಕಾಣದೆ ರಸ್ತೆಯಾಗಿದ್ದು ವಾಹನ ಸವಾರರು ತುಸು ಯಾಮಾರಿದ್ರೂ ಹಳ್ಳಕ್ಕೆ ಬೀಳೋದು ಗ್ಯಾರಂಟಿ.
ಇನ್ನು ಸೇತುವೆಗೆ ಕಂಬಗಳಲ್ಲಿ ಕಬ್ಬಿನದ ಸಳಿಗಳು ಎದ್ದು ಅಪಾಯದ ಮುನ್ಸೂಚನೆ ತೋರುತ್ತಲಿವೆ, ಗ್ರಾಮಸ್ಥರು ಹೇಳೋ ಪೈಕಿ ಸೇತುವೆ ನಿರ್ಮಾಣದ ನಂತರ ನಿರ್ವಹಣೆ ಬಗ್ಗೆ ಯಾವುದೇ ಇಲಾಖೆ ಯಾವುದೇ ಅಧಿಕಾರಿ ಗಮನಿಸಿಲ್ಲ ಎಂತಾರೇ ಮಳೆಗಾಲದಲ್ಲಿ ಸೇತುವೆ ಗುರುತಿಸೋದೆ ಕಷ್ಟ ಎಂತಾರೆ.
ಈ ಬಗ್ಗೆ ಗಮನಿಸಬೇಕಾದ ಲೋಕೋಪಯೋಗಿ ಇಲಾಖೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಳಬುದು ಮುಳ್ಳೊಳ್ಳಿ ಯರಗುಪ್ಪಿ ಗ್ರಾಮಸ್ಥರ ಅಳಲು.
Kshetra Samachara
19/02/2021 04:13 pm