ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಾಂಧಿ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿದ್ದ್ಯಾಕೆ ಗೊತ್ತಾ?

ಧಾರವಾಡ: ಧಾರವಾಡದ ಗಾಂಧಿ ವೃತ್ತದಲ್ಲಿ ಇಂದು ಅಲ್ಲಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಅದಕ್ಕೆ ಕಾರಣ ಅರ್ಧಂಬರ್ಧ ಮಾಡಿದ ಕಾಮಗಾರಿ.

ಗಾಂಧಿ ವೃತ್ತ ಸೇರಿದಂತೆ ಸುಭಾಷ ರಸ್ತೆಯ ಅನೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ, ರಸ್ತೆಯ ಅಕ್ಕಪಕ್ಕ ಫಿನಿಶಿಂಗ್ ಮಾಡಿಲ್ಲ. ಅಲ್ಲದೇ ಫುಟಪಾತ್ ಕೂಡ ಮಾಡಿಲ್ಲ. ರಸ್ತೆಯ ಮಧ್ಯೆ ಮಧ್ಯೆ ದೊಡ್ಡ ದೊಡ್ಡ ಮ್ಯಾನಹೋಲ್ ಸೇರಿದಂತೆ ಗುಂಡಿಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಆ ಗುಂಡಿಗಳಲ್ಲಿ ಮರದ ದಿಮ್ಮೆಗಳನ್ನು ಇಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಕೂಡಲೇ ಪಾಲಿಕೆ ಅಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾ ಮಂತ್ರಿಗಳು ಈ ರೀತಿಯ ಸಮಸ್ಯೆ ಕಡೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರೇ ಎಲ್ಲೆಲ್ಲಿ ಏನೇನು ಸಮಸ್ಯೆ ಇದೆ ಎಂಬುದನ್ನು ತೋರಿಸಿದರು. ಇವನ್ನೆಲ್ಲ ನೋಡಿದ ಅಧಿಕಾರಿಗಳು 15 ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಸಾರ್ವಜನಿಕರು ಪ್ರತಿಭಟನೆ ಕೈ ಬಿಟ್ಟರು.

Edited By : Manjunath H D
Kshetra Samachara

Kshetra Samachara

12/02/2021 07:00 pm

Cinque Terre

40.8 K

Cinque Terre

2

ಸಂಬಂಧಿತ ಸುದ್ದಿ