ಹುಬ್ಬಳ್ಳಿ: ಇಷ್ಟುದಿನ ರೈಲ್ವೆ ನಿಲ್ದಾಣದಲ್ಲಿ ಹಾಗೂ ನಿಂತಿರುವ ರೈಲಿನಲ್ಲಿ ನಡೆಯುತ್ತಿದ್ದ ಕ್ರೈಂಗಳಿಗೆ ಕಡಿವಾಣ ಹಾಕಲು ನೈಋತ್ಯ ರೈಲ್ವೆ ವಲಯ ಹೊಸ ನಿರ್ಧಾರವನ್ನು ಕೈಗೊಂಡಿದೆ.ಇನ್ನುಮುಂದೆ ನೈಋತ್ಯ ವಲಯ ವ್ಯಾಪ್ತಿಯಲ್ಲಿ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಕಣ್ಗಾವಲು ಇರಲಿದೆ.
ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ (ವಿ.ಎಸ್.ಎಸ್ ತೀವ್ರ ನಿಗಾ ವ್ಯವಸ್ಥೆ) ಮೂಲಕ ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲ ಪಡಿಸುವ ಸದುದ್ದೇಶದಿಂದ ವ್ಯವಸ್ಥೆ ಜಾರಿಗೊಳಿಸಿದೆ. ಇಂಟರ್ನೆಟ್ ಪ್ರೋಟೋಕಾಲ್ ಆಧಾರಿತ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಅಳವಡಿಸಿದ್ದು,ನೈಋತ್ಯ ವಲಯದ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ನೀಡಲು ಈ ಯೋಜನೆ ಜಾರಿಗೊಳಿಸಿದೆ.
ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಅನ್ನು ಪ್ರಯಾಣಿಕರ ಕಾಯುವ ಸ್ಥಳ,ಟಿಕೆಟ್ ವಿತರಣೆ ಸ್ಥಳ,ಪಾದಚಾರಿ ಮೇಲು ಸೇತುವೆ,ಪಾರ್ಕಿಂಗ್ ಹಾಗೂ ಬುಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ.
ದೇಶದ 983 ನಿಲ್ದಾಣದಲ್ಲಿ ಹಾಗೂ ನೈಋತ್ಯ ರೈಲ್ವೆಯ 11 ನಿಲ್ದಾಣದಲ್ಲಿ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಅಳವಡಿಕೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. 4k ರೆಸ್ಯೂಲೇಶನ್ ಸಾಮರ್ಥ್ಯದ ಎಚ್.ಡಿ ಕ್ಯಾಮೆರಾಗಳನ್ನು ಹೊಂದಿರುವ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ನಿಲ್ದಾಣದಲ್ಲಿನ ಚಲನವಲನ ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ..
Kshetra Samachara
12/02/2021 11:27 am