ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: 'ಗಾಂಧಿ ಮಾರುಕಟ್ಟೆ ತರಕಾರಿ ಮಳಿಗೆ ಸ್ಥಳಾಂತರ ಕಾನೂನು ಬಾಹಿರ: ತಹಸೀಲ್ದಾರ್ ಮೂಲಕ ಮನವಿ

ನವಲಗುಂದ : ನಗರದ ಮಧ್ಯ ಭಾಗದಲ್ಲಿ ಇರುವಂತಹ ತರಕಾರಿ ಮಳಿಗೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಾನೂನು ಬಾಹಿರ ಸ್ಥಳಾಂತರ ಮಾಡುವುದರ ಮೂಲಕ ಬೀದಿ ಬದಿಯ ವ್ಯಾಪಾರಸ್ಥರ ಬದುಕಿನ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ನಗರದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ನಂತರ ಮಾತನಾಡಿದ ಪುರಸಭೆಯ ಮಾಜಿ ಉಪಾಧ್ಯಕ್ಷ ಸೈಪುದ್ದೀನ ಅವರಾದಿ, ಇವತ್ತು ಒಂದು ತರಕಾರಿ ತರಲು 2 ಕಿ.ಮೀ ದೂರವಿರುವಂತಹ ಎಪಿಎಂಸಿಗೆ ಹೋಗಬೇಕು, ಇನ್ನು ವಯಸ್ಸಾದವರು, ವೃದ್ಧರು ಹೋಗಿ ತರಕಾರಿ ಹೇಗೆ ತೆಗೆದುಕೊಂಡು ಬರುತ್ತಾರೆ, ಇಲ್ಲಿ ಉದ್ದೇಶಪೂರ್ವಕವಾಗಿ ಪುರಸಭೆಯ ಮುಖ್ಯಾಧಿಕಾರಿಗಳು ಬೀದಿ ಬದಿಯ ವ್ಯಾಪಾರಸ್ಥರನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿದ್ದಾರೆ, ಇವರಿಗೆ ಅನ್ಯಾಯವಾಗಿದೆ ನಮ್ಮ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸದಿದ್ದರೆ ಬೀದಿ ಬದಿಯ ವ್ಯಾಪಾರಸ್ಥರೊಂದಿಗೆ ಉಗ್ರ ಹೋರಾಟವನ್ನು ಮಾಡುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಶಿಡಗಂಟಿ, ಅಬ್ಬಾಸಲಿ ದೇವರಿಡು,ಹಟೆಲಸಾಬ್ ರಾಮದುರ್ಗ, ಪ್ರಕಾಶ, ಪಕ್ಕಿರಪ್ಪ, ರಿಯಾಜಅಹ್ಮದ್ ಬೇಪಾರಿ, ಸೈಯದ್ ಕೆರೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

10/02/2021 07:24 pm

Cinque Terre

15.47 K

Cinque Terre

0

ಸಂಬಂಧಿತ ಸುದ್ದಿ