ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : RFID ಉಪಕರಣ ಹಾಳು ಮಾಡಿದರೆ ಮನೆ ಮಾಲಿಕರಿಂದ ವಸೂಲಿ

ಹುಬ್ಬಳ್ಳಿ : ಮನೆಗಳಿಂದ ನಿತ್ಯ ಕಸ ಸಂಗ್ರಹದ ಮಾಹಿತಿ ದಾಖಲಿಸಲು ನಿಮ್ಮ ಮನೆ ಕಂಪೌಂಡಗೆ ಚಿಕ್ಕ ಡಿವೈಸ್( ಆರ್ಎಫ್ಐಡಿ ಟ್ಯಾಗ್) ಅಳವಡಿಸಲಾಗಿರುವುದು ನಿಮಗೆ ಗೊತ್ತಿದೆಯಲ್ಲವೆ? ಹೌದು ನಿಮ್ಮ ರಸ್ತೆಯಲ್ಲಿ ಬರುವ ಕಸ ಸಂಗ್ರಹ ವಾಹನದ ಓರ್ವ ಸಿಬ್ಬಂದಿ ನಿತ್ಯ ಈ ಡಿವೈಸ್ ಎದುರು ತಮ್ಮ ಬಳಿಯ ಯಂತ್ರ ಹಿಡಿದು ಮಾಹಿತಿ ದಾಖಲಿಸಿಕೊಳ್ಳುತ್ತಾರೆ. ಅದು ಇಂಟರ್ ನೆಟ್ ಮೂಲಕ ಕೇಂದ್ರ ಕಚೇರಿಗೆ ವಿವರ ರವಾನಿಸುತ್ತಿದೆ.

ಇನ್ನು ಮುಂದೆ ನಿಮ್ಮ ಕಂಪೌಂಡಗೆ ಅಳವಡಿಸಿರುವ ಆರ್ಎಫ್ಐಡಿ ಟ್ಯಾಗ್ ರಕ್ಷಣೆ ನಿಮ್ಮ ಜವಾಬ್ದಾರಿ. ವದಂತಿಗಳನ್ನು ನಂಬಿ ಅದನ್ನು ಹಾಳು ಮಾಡುವುದಾಗಲಿ, ಕಿತ್ತು ಹಾಕುವುದಾಗಲಿ ಮಾಡಿದರೆ ದಂಡ ತೆತ್ತಬೇಕಾಗುತ್ತದೆ. ಈ ಉಪಕರಣ ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ರಕ್ಷಿಸುವುದು ಮನೆ ಮಾಲಿಕರು ಹಾಗೂ ಬಾಡಿಗೆದಾರರ ಜವಾಬ್ದಾರಿ. ಉಪಕರಣ ಹಾನಿಗೊಳಗಾದರೆ ಅದರ ಮೌಲ್ಯದ ಹಣವನ್ನು ಆಸ್ತಿ ತೆರಿಗೆ ಚಲನ್ ದಲ್ಲಿ ಸೇರಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

09/02/2021 08:43 pm

Cinque Terre

21.53 K

Cinque Terre

6

ಸಂಬಂಧಿತ ಸುದ್ದಿ