ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯರ ಸ್ಪೂರ್ತಿ ಯುವಕರಿಗೆ ದಾರಿದೀಪ- ಸಂತೋಷ. ಆರ್. ಶೆಟ್ಟಿ

ಹುಬ್ಬಳ್ಳಿ- ನಾದಲೋಕ ಕಲಾವೇದಿಕೆ ಹಾಗೂ ಹಾಸ್ಯಲೋಕ ನಕ್ಕು ನಲಿವ ವೇದಿಕೆ ಇವರ ವತಿಯಿಂದ ನಗು ನಗಿಸು ಹಾಗೂ ಹಿರಿಯ ನಾಗರಿಕ ಕಲಾವಿದರಿಂದ ಮಧುರ ಗೀತ ಗಾಯನ ಕಾರ್ಯಕ್ರಮವು ನಗರದ ಭವಾನಿನಗರದ ವಿವೇಕಾನಂದ ಕಾಲೋನಿಯಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕøತ ಹಾಗೂ ಸಮಾಜ ಸೇವಕ ಸಂತೋಷ ಆರ್.ಶೆಟ್ಟಿ ಮಾತನಾಡಿ ಹುಬ್ಬಳ್ಳಿ ಧಾರವಾಡದಲ್ಲಿ ಇಂತಹ ಮನರಂಜನೆಯ ಕಾರ್ಯಕ್ರಮಗಳು ನಡೆಯಲಿ ಹಾಗೂ ಹಿರಿಯರ ಸ್ಪೋರ್ತಿ ಯುವಕರಿಗೆ ದಾರಿದೀಪವಾಗಲಿ ಎಂದು ನುಡಿದರು.

ಇದೇ ವೇಳೆ ಮಾತನಾಡಿದ ಸಂಶುದ್ದೀನ ಹುಬ್ಬಳ್ಳಿ, ಗಾಯನಗಳಿಗೆ ಮರುಳಾಗದ ಜನರೆ ಇಲ್ಲ. ಕಾರ್ಯಕ್ರಮದಲ್ಲಿ ರಸದೌತಣ ನೀಡಿದ ಎಲ್ಲ ಕಲಾವಿದರಿಗೂ ನನ್ನ ಅಭಿನಂದನೆಗಳು ಎಂದು ತಿಳಿಸಿದರು.ಇಲ್ಲಿನ ವಿವೇಕಾನಂದ ಶಾಲೆಯ ಆವರಣದ ಡಾ.ಪಿ.ವಿ.ದತ್ತಿ ಸಭಾಗೃಹದಲ್ಲಿ ಅನೇಕ ಹಾಸ್ಯ ಕಲಾವಿದರು ನಗೆ ಪಟಾಕಿ ಹಾರಿಸಿದರು.

ಈ ವೇಳೆ ಮಲ್ಲಪ್ಪ ಹೊಂಗಲ, ಸುನೀಲ ಪತ್ರಿ ಸೇರಿದಂತೆ ಅನೇಕ ಕಲಾವಿದರು ತಮ್ಮ ಹಾಸ್ಯ ಕಲಾಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮವನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದರಲ್ಲದೆ ಹಲವರು ಮಿಮಿಕ್ರಿಯಿಂದ ಜನರನ್ನು ಮಂತ್ರಮುಗ್ದರನ್ನಾಗಿ ಮಾಡುವಲ್ಲಿ ಯಶಸ್ಸು ಗಳಿಸಿದರು.ನಂತರ ಹಿರಿಯ ಕಲಾವಿದರು ಕರೋಕೆ ಸಂಗೀತವನ್ನು ಕನ್ನಡ, ಹಿಂದಿ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.

ರವಿ ಅಳವಂಡಿ, ಶೆಟ್ಟರ್ ದಂಪತಿಗಳು, ಲಲಿತಾ ಬೆಟಗೇರಿ, ರವಿ ಬೆಟಗೇರಿ ಸೇರಿದಂತೆ ಇನ್ನಿತರ ಕಲಾವಿದರು ಹಾಡಿದರು.

ಈ ಸಂದರ್ಭದಲ್ಲಿ ಕಮಲಾ ಶಿಡೇನೂರ, ಆರ್.ಎಮ್.ಗೋಗರಿ, ಶ್ರೀಪಾದ ಜೋಶಿ, ಅರುಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Edited By : Nirmala Aralikatti
Kshetra Samachara

Kshetra Samachara

09/02/2021 12:58 pm

Cinque Terre

9 K

Cinque Terre

0

ಸಂಬಂಧಿತ ಸುದ್ದಿ