ಹುಬ್ಬಳ್ಳಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ 2016 ರಲ್ಲಿ ತಡಸಿನಕೊಪ್ಪದಲ್ಲಿನ ನಿವೇಶನ ಹಂಚಿಕೆಗೆ ಅರ್ಜಿ ಕರೆಯಲಾಗಿತ್ತು.. ನಿವೇಶನ ಹಂಚಿಕೆ ಪ್ರಕ್ರಿಯ ಮುಂದುವರೆಸಿದ್ದು ಶೀಘ್ರವಾಗಿ ನಿವೇಶನ ಹಂಚಿಕೆ ಮಾಡಲಾಗುವದು ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.
ಇಂದು ಹುಡಾ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ತಡಸಿನಕೊಪ್ಪ ಲೇಔಟ್ ವಿಕ್ಷಣೆಯನ್ನು ಮಾಡಿ ಅವರು ಮಾತನಾಡಿದರು.
ಅತಿ ಶೀಘ್ರದಲ್ಲಿ ಅರ್ಜಿ ಹಾಕಿದವರಿಗೆ ಲಾಟರಿ ಮೂಲಕ 275 ನಿವೇಶನವನ್ನು ಹಾಗೂ ಲಕ್ಕಮನಹಳ್ಳಿಯಲ್ಲಿ 62 ನಿವೇಶನವನ್ನು ಹಂಚಿಕೆ ಮಾಡಲಾಗುವುದು. ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ನಿರಂತರವಾಗಿ ನೆಡೆಯಲಿದೆ, ಹುಬ್ಬಳ್ಳಿ ಮಂಟೂರ ರೋಡ್ ನಲ್ಲಿರುವ ಅನಧಿಕೃತ ಲೇಔಟ್ ಧಾರವಾಡ ದಲ್ಲಿರುವ ಗೋವನಕೋಪ್ಪ, ಕೆಲಗೇರಿ ಕೆರಿ, ಯಲ್ಲಿರುವ ಅನಧಿಕೃತ ಲೇಔಟ್ ತೆರವು ಮಾಡಲಾಗಿದೆ. ಅನಧಿಕೃತ ಲೇಔಟ್ ಮಾಲಿಕರು ಅಲ್ಲಿ 20*30 ಅಳತೆ ನಿವೇಶನವನ್ನು ಬಡಜನರಿಗೆ 20 ರೂ, 50 ರೂಪಾಯಿ ಬಾಂಡ್ ಪೇಪರ್ ಬರೆದುಕೊಟ್ಟು ಮೋಸ ಮಾಡಿದ್ದಾರೆ. ಇದರಿಂದ ಬಡಜನರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿವೆ. ಮುಂದಿನ ದಿನಗಳಲ್ಲಿ ಇಂಥಹ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತ ಲೇಔಟ್ ಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
Kshetra Samachara
30/01/2021 07:42 pm