ಹುಬ್ಬಳ್ಳಿ : 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಿಲಾನ್ಯಾಸ ಚಾಲನೆ ನೀಡಲಾಗಿದೆ.
ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಪ್ಲೈ ಓವರ್ ನಿರ್ಮಾಣಕ್ಕೆ ನಿಮ್ಮ ಒಮ್ಮತವಿದಿಯೇ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ ಸಣ್ಣ ಸರ್ವೇವೊಂದನ್ನಾ ಕೈಗೊಂಡಿತ್ತು.
ನಿತ್ಯ ತನ್ನ ಓದುಗರ ಮುಂದೆ ನಿಮ್ಮ ಒಪ್ಪಿಗೆ ತಿಳಿಸಿ ಎಂದು ಕೇಳಿದ ಪ್ರಶ್ನೇಗೆ 10000 ಜನ ಪೋಲ್ ನಲ್ಲಿ ಭಾಗವಹಿಸಿ ಪ್ರತಿಶತ 86 ರಷ್ಟು ಜನ ಪ್ಲೈ ಓವರ್ ನಿರ್ಮಾಣಕ್ಕೆ ತಮ್ಮ ಸಹಮತಿವಿದೆ ಎಂದು ತಿಳಿಸಿದ್ದಾರೆ.
ಬೃಹತ್ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಈ ಕಾರ್ಯಕ್ಕೆ ಜನ ಜೈ ಎಂದಿದ್ದಾರೆ. ನಗರ ಅಭಿವೃದ್ಧಿಯ ಸೂಚ್ಯಾಂಕವಾದ ಈ ಕಾರ್ಯ ಶೀಘ್ರ ಪ್ರಾರಂಭವಾಗಿ ಯಶಸ್ವಿಯಾಗಲಿ ಎಂಬುವುದೇ ನಮ್ಮ ಆಶಯ..
Kshetra Samachara
19/01/2021 10:51 pm