ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಯ್ಯೋ ಈ ನಗರಕ್ಕೆ ಮೂಲಭೂತ ಸೌಕರ್ಯಗಳೇ ಇಲ್ಲ! ಪಾಲಿಕೆ ವಿರುದ್ಧ ಗರಂ ಆದ ಸನ್ ಸಿಟಿ ಗಾರ್ಡನ್ ನಿವಾಸಿಗಳು

ಹುಬ್ಬಳ್ಳಿ: ಅದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಸಿಸುವ ಅದೆಷ್ಟೋ ನಗರದಲ್ಲಿ ಇನ್ನೂ ವರೆಗೂ ಮೂಲಭೂತ ಸೌಕರ್ಯಗಳಿಲ್ಲದೇ, ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಅಷ್ಟಕ್ಕೂ ಆ ನಗರ ಹೇಗಿದೆ ಎಂಬುದನ್ನು ತೋರಸ್ತೆವಿ ನೋಡಿ....

ಹೀಗೆ ತಮಗೇ ಸೀಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ, ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ಕಂಡು ಬಂದಿದ್ದು, ವಾರ್ಡ್ ನಂಬರ್ 30 ರ ಎಪಿಎಮ್ ಸಿ ಕುಸುಗಲ್ ರಸ್ತೆ ಹತ್ತಿರ ಪಟಾಕ್ಸಿ ಫ್ಯಾಕ್ಟರಿ ಬಳಿ ಇರುವ ಸನ್ ಸಿಟಿ ಗಾರ್ಡ್ ನಲ್ಲಿ, ಸುಮಾರು ವರ್ಷಗಳಿಂದ ಅದೆಷ್ಟೋ ಹಣ ಖರ್ಚು ಮಾಡಿ ಮನೆ ನಿರ್ಮಾಣ‌ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರಿಗೆ, ಓಡಾಡಲು ರಸ್ತೆ, ನೀರು, ಚರಂಡಿ ವ್ಯವಸ್ಥೆ ಮಹಾನಗರ ಪಾಲಿಕೆ ಅಧಿಕಾರಿಗಳು ಒದಗಿಸುವಲ್ಲಿ ವಿಫಲವಾಗಿದ್ದರೆ.

ಇದರಿಂದ ಆಕ್ರೋಶಗೊಂಡ ಇಲ್ಲಿನ ನಿವಾಸಿಗಳು, ಸುಮಾರು ವರ್ಷಗಳಿಂದ ವಿದ್ಯುತ್ ಸೌಲಭ್ಯ, ನೀರು ಒಳಚರಂಡಿ, ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ನಿವಾಸಿಗಳು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ...

ಇನ್ನೂ ಮಳೆ ಬಂದ್ರೆ ಸಾಕು, ಈ ನಗರದಲ್ಲಿನ ರಸ್ತೆಗಳೆಲ್ಲಾ ಹಳ್ಳದಂತೇ ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ ವಿದ್ಯುತ್ ಸಂಪರ್ಕ,ಚರಂಡಿ ವ್ಯವಸ್ಥೆ ಇಲ್ಲದೇ ಪರದಾಡುವ ಪ್ರಸಂಗ ಬಂದೊದಗಿದೆ.

ಕತ್ತಲಾದ್ರೇ ಸಾಕೂ ಅನೈತಿಕ ಚಟುವಟಿಕೆಗಳು ಹಾವಳಿ ಹೆಚ್ಚಾಗಿದೆ ಇದರ ಜೊತೆಗೆ ಕುಡುಕರು, ಹಂದಿಗಳು ಬಿದಿ ನಾಯಿಗಳ ಕಾಟವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನಿವಾಸಿಗಳ ರಾತ್ರಿಯಾದ್ರೆ ಸಾಕು ಮಹಿಳೆಯರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛವಾಗಿ ಇಡುವ ಕುರಿತು ಮಾಹಿತಿ ನೀಡುವ ಪಾಲಿಕೆ ಅಧಿಕಾರಿಗಳು, ಇಷ್ಟೆಲ್ಲಾ ಸಮಸ್ಯೆಗಳ ಕಂಡರು ಸಹ ಕಾಣದಂತೇ ವರ್ತಿಸುತ್ತಿದ್ದಾರೆ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ ನೀಡದೆ ಹೋದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ..

ಒಟ್ಟಿನಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡಲು ಹೋರಟಿರುವ ರಾಜಕೀಯ ಮುಖಂಡರಗಳು, ಇನ್ನೂ ಈ ಸನ್ ಸಿಟಿ ಗಾರ್ಡನ್ ನಗರಕ್ಕೆ, ಮೂಲಭೂತ ಸೌಕರ್ಯಗಳ ಜೊತೆಗೆ ಇನ್ನಿತರ ಸಮಸ್ಯೆ ಬಗೆಹರಿಸಿ ಉತ್ತಮ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.....!

ಈರಣ್ಣ ವಾಲಿಕಾರ: ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

15/01/2021 04:08 pm

Cinque Terre

50.1 K

Cinque Terre

4

ಸಂಬಂಧಿತ ಸುದ್ದಿ