ಕುಂದಗೋಳ : ಪಟ್ಟಣದ ಮಾರ್ಕೇಟ್ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಭೂಮಿ ಒಳಗೆ ಅಳವಡಿಸಿದ ಬೋರವೆಲ್ ಪೈಪ್ ವಾಹನ ಸಂಚಾರದ ದಕ್ಕೆ ಪರಿಣಾಮ ಒಡೆದು ಜೀವ ಜಲ ಹರಿದು ಚರಂಡಿ ಸೇರುತ್ತಿದೆ.
ಬೋರವೆಲ್ ಪೈಪ್ ಒಡೆದದ್ದರಿಂದ ರಸ್ತೆ ಮೇಲೆ ನೀರು ಹರಿಯುತ್ತಿರುವುದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿ ರಸ್ತೆ ಮೇಲೆ ನೀರು ಸಂಗ್ರಹವಾಗಿದೆ.
ಇಂದು ಬೆಳಿಗ್ಗೆ ಪೈಪ್ ಒಡೆದದ್ದನ್ನು ಗಮನಿಸಿದ ಸ್ಥಳೀಯರು ಸಾಯಂಕಾಲವಾದರೂ ಸಂಬಂಧಪಟ್ಟ ಪಟ್ಟಣ ಪಂಚಾಯಿತಿಯವರು ಗಮನಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಶೀಘ್ರ ಪೈಪ್ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.
Kshetra Samachara
12/01/2021 07:31 pm