ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಸ್ತೆ ಏನೋ ಚನ್ನಾಗಿ ಮಾಡಿರಿ ಆದ್ರೆ ಆಗುವ ಸಮಸ್ಯೆಗೆ ಹೊಣೆ ಯಾರು...?

ಹುಬ್ಬಳ್ಳಿ:ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯಭಾಗ.ಈ ಹೃದಯ ಭಾಗದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ ವಿನಃ ಸಂಚಾರಿ ನಿಯಮ ಮಾತ್ರ ಪಾಲನೆಯಾಗುತ್ತಿಲ್ಲ. ಅಲ್ಲದೇ ಇಲ್ಲಿ ಯಾವುದೇ ಸಿಗ್ನಲ್ ಇಲ್ಲದಿರುವುದರಿಂದ ಅಪಘಾತಗಳ ಸಂಭವಿಸುತ್ತಿವೆ.ಅಷ್ಟಕ್ಕೂ ಆ ರಸ್ತೆ ಯಾವುದು ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ಸಾರ್ವಜನಿಕರ ಕೋಟಿ ಕೋಟಿ ಹಣ ಮಾತ್ರ ಅವೈಜ್ಞಾನಿಕ ಯೋಜನೆಯಿಂದ ಪೋಲಾಗುತ್ತಿದೆ. ಸರಿಯಾದ ಸಂಚಾರ ನಿಯಮ ಇಲ್ಲದ ಕಾರಣ ಎಲ್ಲೆಂದರಲ್ಲಿ ವಾಹನಗಳು ನುಗ್ಗುತ್ತಿದ್ದು,ಸಣ್ಣ ಪುಟ್ಟ ಅಪಘಾತಗಳು ಮಾತ್ರ ಲೆಕ್ಕವಿಲ್ಲದಷ್ಟು ಆಗುತ್ತಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕಿನಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೇ ಇಲ್ಲಿ ಸಂಚಾರ ನಿಯಮ ಪಾಲನೆಗೆ ಯಾವುದೇ ಸಿಗ್ನಲ್ ಗಳಾಗಲಿ.ಅಥವಾ ಟ್ರಾಫಿಕ್ ಪೊಲೀಸರಾಗಲಿ ಇಲ್ಲದಿರುವುದು ಅವೈಜ್ಞಾನಿಕ ಸಂಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಇನ್ನೂ ಸಂಚಾರ ನಿಯಮ ಪಾಲನೆ ಇಲ್ಲದಂತಾಗಿದ್ದು,ಯಾರು ಯಾರಿಗೇ ಅಪಘಾತ ಮಾಡುತ್ತಾರೋ ಎಂಬುವುದೇ ಆತಂಕದ ಸಂಗತಿಯಾಗಿದೆ.

ಪ್ರಸ್ತುತ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆ ತಲೆದೂರುತ್ತಿದೆ.ಪ್ರತಿಷ್ಠಿತ ಶಿರೂರ ಪಾರ್ಕಿನ ಟೆಂಡರ್ ಶ್ಯೂರ್ ರಸ್ತೆಯಲ್ಲಿ‌ನ ಪರಿಸ್ಥಿತಿಯನ್ನು ಗಮನಿಸಿದಾಗ ಇಲ್ಲಿರುವ ಅವ್ಯವಸ್ಥೆ ಕಣ್ಣು ಮುಂದೆ ಬಂದು ಹೋಗುತ್ತದೆ.

ಸಂಜೆ ಸಮಯದಲ್ಲಿ ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿಗಳು,ಆಫೀಸ್ ಬಿಟ್ಟು ಬರುವ ನೌಕರರು ಹಾಗೂ ಸಾರ್ವಜನಿಕರ ವಾಹನಗಳು ಎಲ್ಲೆಂದರಲ್ಲಿ ನುಗ್ಗುವುದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ.ಆದ್ರೇ ಇಲ್ಲಿ ಸಿಗ್ನಲ್ ಇಲ್ಲದ ಪರಿಣಾಮವಾಗಿ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುವ ಮೂಲಕ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ.

Edited By : Manjunath H D
Kshetra Samachara

Kshetra Samachara

08/01/2021 10:10 am

Cinque Terre

43.98 K

Cinque Terre

5

ಸಂಬಂಧಿತ ಸುದ್ದಿ