ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಹರು ಮೈದಾನದ ಪೆವಿಲಿಯನ್ ಶೀಘ್ರದಲ್ಲಿ ಮರುನಿರ್ಮಾಣ

ಹುಬ್ಬಳ್ಳಿ- ಸರಿಯಾಗಿ 62 ವರ್ಷಗಳ ಇತಿಹಾಸ ಇರುವ ಹುಬ್ಬಳ್ಳಿ ನೆಹರು ಮೈದಾನದ ಪೆವಿಲಿಯನ್ ಸದ್ಯದ ಮಟ್ಟಿಗೆ ನೆಲಸಮವಾಗಿದೆ. ಕಾರಣ ಸದ್ಯದರಲ್ಲೇ ಅದೇ ಜಾಗದಲ್ಲಿ ಅತ್ಯಾಧುನಿಕ ಪೆವಿಲಿಯನ್ ನಿರ್ಮಾಣವಾಗಲಿದೆ.

ಒಟ್ಟು 6.4 ಎಕರೆ ಪ್ರದೇಶದಲ್ಲಿರುವ ನೆಹರು ಮೈದಾನ ಹುಬ್ಬಳ್ಳಿಯ ಹೆಮ್ಮೆ‌. ಕೇವಲ ಕ್ರೀಡೆಗಷ್ಟೇ ಅಲ್ಲ. ರಾಜಕೀಯ ಕ್ಷೇತ್ರದ ಐತಿಹಾಸಿಕ ಸಮಾವೇಶಗಳಿಗೂ ಈ ಮೈದಾನ ವೇದಿಕೆ ಒದಗಿಸಿಕೊಟ್ಟಿದೆ‌. ಸಾಕ್ಷಿಯಾಗಿದೆ. ರಾಷ್ಟ್ರ ಮಟ್ಟದ ಘಟಾಘಟಿ ರಾಜಕೀಯ ನಾಯಕರು ಈ ಮೈದಾನದಲ್ಲಿ ರಾಜಕೀಯ ಭಾಷಣ ಮಾಡಿ ಹೋಗಿದ್ದಾರೆ‌.

ಅಷ್ಟೇ ಅಲ್ಲ. ಅಗ್ರಗಣ್ಯ ಕ್ರೀಡಾ ಪಟುಗಳು ಸಹಿತ ಇಲ್ಲಿನ ಮಣ್ಣು ಮೆಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್, ಸುನೀಲ್ ಗಾವಸ್ಕರ್, ಕಪಿಲ್ ದೇವ್, ಮೊಹಮ್ಮದ್ ಅಝರುದ್ದೀನ್, ಅನಿಲ್ ಕುಂಬ್ಳೆ ಸಹ ಈ ಮೈದಾನದಲ್ಲಿ ಆಡಿದ್ದಾರೆ. ಅವರೆಲ್ಲ ಇದೇ ಪೆವಿಲಿಯ ಬಳಸಿದ್ದಾರೆ.

ಈ ಎಲ್ಲ ಆಟಗಾರರನ್ನು ಕಂಡ ಪೆವಿಲಿಯನ್ ಈಗ ಮರುನಿರ್ಮಣವಾಗುತ್ತಿದೆ. 1958ರಲ್ಲಿ ನಿರ್ಮಿಸಲಾಗಿದ್ದ ಈ ಪೆವಿಲಿಯನ್ ಅನ್ನು ಕೆಡವಿ ಅತ್ಯಾಧುನಿಕ ಪೆವಿಲಿಯನ್ ಕಟ್ಟಲು ಯೋಜಿಸಲಾಗಿದೆ. ಇದಕ್ಕಾಗಿ ಈಗಾಲೇ ಯೋಜನೆ ರೂಪಿಸಲಾಗಿದೆ. ₹20.3 ಕೋಟಿ ವೆಚ್ಚದಲ್ಲಿ ನೂತನ ಪೆವಿಲಿಯನ್ ತಲೆ ಎತ್ತಲಿದೆ ಎಂದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್.ಎಚ್ ನರೇಗಲ್ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

16/11/2020 10:46 pm

Cinque Terre

45.64 K

Cinque Terre

3

ಸಂಬಂಧಿತ ಸುದ್ದಿ