ಕುಂದಗೋಳ : ಮುಂಗಾರು ಹಂಗಾಮಿಗೆ ಈಗಾಗಲೇ ಬಿತ್ತನೆಗೆ ತಯಾರಾದ ರೈತರಿಗೆ ಆಧುನಿಕ ಕೃಷಿ ಯಂತ್ರಗಳು ಬಲು ಉಪಯುಕ್ತವಾಗಿವೆ ಅದರಲ್ಲೂ ಶೇಂಗಾ ಬೀಜದ ಯಂತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.
ಹೌದು ! ಈ ಮೊದಲು ಶೇಂಗಾ ಬಿತ್ತನೆಗೆ ಶೇಂಗಾ ಕಾಯಿಗಳನ್ನು ಕೈಯಿಂದ ಒಡೆದು ಬೀಜ ತೆಗೆದು ಬಿತ್ತುವ ಪ್ರಮೇಯ ದೂರವಾಗಿ ಎಲ್ಲರೂ ಶೇಂಗಾ ಬೀಜ ಬೇರ್ಪಡಿಸುವ ಯಂತ್ರದ ಎಡೆಗೆ ಮುಖ ಮಾಡಿದ್ದು, ಬೀಜಕ್ಕಾಗಿ ಶೇಂಗಾ ಚೀಲ ಹೇರಿಕೊಂಡು ಬಂದ ರೈತರ ಟ್ರ್ಯಾಕ್ಟರ್ ಸಾಲು ದಾರಿಯುದ್ದಕ್ಕೂ ಏರ್ಪಟ್ಟಿದೆ.
ಪ್ರತಿ ಚೀಲಕ್ಕೆ 50 ರೂಪಾಯಿ ನಿಗದಿ ಪಡಿಸಲಾದ ಶೇಂಗಾ ಯಂತ್ರಕ್ಕೆ ಬೀಜ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ನಿನ್ನೆ ಸುರಿದು ಧಾರಾಕಾರ ಮಳೆ ಮುಂಗಾರು ಬಿತ್ತನೆಗೆ ಮತ್ತಷ್ಟೂ ಹುಮ್ಮಸ್ಸುನ್ನು ರೈತರಿಗೆ ನೀಡಿದೆ.
ಕೃಷಿ ಅಧಿಕಾರಿಗಳ ವರದಿ ಪ್ರಕಾರ ಕುಂದಗೋಳ ತಾಲೂಕಿನ ಎಲ್ಲೆಡೆ ಈ ವರ್ಷ 17 ಸಾವಿರ ಹೆಕ್ಟೇರ್ ಭೂಮಿ ಶೇಂಗಾ ಬಿತ್ತನೆ ಗುರಿ ಹೊಂದಿದ್ದು, ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶೇಂಗಾ ಬೀಜ ಬೇರ್ಪಡಿಸುವ ಕಾರ್ಯದಲ್ಲಿ ಯಂತ್ರಗಳನ್ನು ಅರಸುತ್ತಿದ್ದಾರೆ.
ಒಟ್ಟಾರೆ ಆಧುನಿಕ ಯಂತ್ರೋಪಕರಣಗಳು ಕೃಷಿ ಪದ್ಧತಿಗೆ ಅನುಕೂಲ ಎಂಬುದಕ್ಕೆ ಈ ಶೇಂಗಾ ಬೀಜ ಬೇರ್ಪಡಿಸುವ ಯಂತ್ರ ಉದಾಹರಣೆಯಾಗಿದೆ.
Kshetra Samachara
03/06/2022 02:04 pm