ಹುಬ್ಬಳ್ಳಿಯ ಆಯಕಟ್ಟಿನ ಜಾಗೆಯಲ್ಲಿ ಒಂದಾಗಿರುವ ಸಿಬಿಟಿ ಶಾ ಬಜಾರ್ ನಲ್ಲಿ ಅವ್ಯವಸ್ಥೆ ತಲೆದೂರಿದೆ. ಚೆನ್ನಾಗಿದ್ದ ಫುಟ್ ಪಾತ್ ಅಗೆದು ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಅವ್ಯವಸ್ಥೆ ಹುಟ್ಟು ಹಾಕಿದ್ದಾರೆ.
ಫುಟ್ ಪಾತ್ ಮೇಲೆ ಫೀವರ್ಸ್ ಹೊಂದಿಸಿ ಸ್ಮಾರ್ಟ್ ಮಾಡುತ್ತೇವೆ ಎಂದು ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು, ಸಂಜೆ ವೇಳೆಯಲ್ಲಿ ಸಂಚರಿಸುವ ಸಾರ್ವಜನಿಕರು ಗುಂಡಿಯಲ್ಲಿ ಬಿದ್ದು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ.
ದಿನಕ್ಕೆ ಸಾವಿರಾರು ಜನರು ಮಾರ್ಕೆಟ್ ಹಾಗೂ ಇನ್ನಿತರ ಕೆಲಸಕ್ಕೆ ಈ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಾರೆ. ಈ ರೀತಿ ಮಾರ್ಗ ಮಧ್ಯದಲ್ಲಿ ದೊಡ್ಡ ಪ್ರಮಾಣದ ಗುಂಡಿ ತೆಗೆದು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರಿಗೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಇಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರ ಸ್ಥಿತಿಯಂತೂ ಹೇಳ ತೀರದಾಗಿದ್ದು, ಸಮಸ್ಯೆಗೆ ಬೇಸತ್ತ ವ್ಯಾಪಾರಸ್ಥರು ವೀಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಕಳಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡು ಈ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕಿದೆ.
Kshetra Samachara
13/04/2022 09:02 pm