ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಇದು 'ಹಂದಿ' ಮಾರ್ಕೆಟ್ ಅಲ್ಲ : ಮಂದಿ ಮಾರ್ಕೆಟ್

ನವಲಗುಂದ : ಇದು 'ಹಂದಿ' ಮಾರ್ಕೆಟ್ ಅಲ್ಲಸ್ವಾಮಿ ಮಂದಿ ಮಾರ್ಕೆಟ್ ಏನಿದು ಅಚ್ಚರೀ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಕೊಂಡು ಬರೋನ ಬನ್ನಿ ಪುರಸಭೆ ನಿರ್ಲಕ್ಷಕ್ಕೆ ಒಳಗಾಗಿ ಸಾರ್ವಜನಿಕರ ನೂತನ ಮಾರ್ಕೆಟ್ ಮಳಿಗೆ ಕೇಂದ್ರಗಳು ಈಗ ಹಂದಿಗಳ ನೂತನ ಮಾರ್ಕೆಟ್ ಮಳಿಗೆ ಕೇಂದ್ರಗಳಾಗಿವೆ.

ಹಾಗೆ ಮಲ-ಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿದೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತಿದ್ದ ವ್ಯಾಪಾರಸ್ತರಿಗೆ ಅನುಕೂಲವಾಗಲೆಂದು ಈ ಹಿಂದಿನ ಆಡಳಿತ ವ್ಯವಸ್ಥೆ ನೂತನ ಮಾರುಕಟ್ಟೆ ಮಳಿಗೆ ಕೇಂದ್ರಗಳನ್ನ ನಿರ್ಮಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತ್ತು.

ಆದ್ರೆ ವಿಪರ್ಯಾಸ ನೋಡಿ ನಮ್ಮ ಬೀದಿ ಬದಿ ವ್ಯಾಪಾರಸ್ತರು ವ್ಯಾಪಾರಕ್ಕೆ ಅಲ್ಲಿಗೆ ಹೋಗಿಲೇ ಇಲ್ಲಾ ಅದಕ್ಕೆ ಕಾರಣ ಕೇಳಿದ್ರೆ ಕೆಲವರು ಹೇಳಿದ್ದು ಹೀಗೆ ಅಲ್ಲಿ ವ್ಯಾಪಾರಕ್ಕೆ ಮಳಿಗೆಗಳು ಚಿಕ್ಕದಾಗಿವೆಯಂತೆ ಪುರಸಭೆಯವರು ಸರಿಯಾದ ಕಾನೂನು ಜಾರಿ ಮಾಡಿ ಕಡ್ಡಾಯವಾಗಿ ಎಲ್ಲ ವ್ಯಾಪಾರಸ್ಥರು ಅಲ್ಲಿಯೇ ಹೋಗಿ ವ್ಯಾಪಾರ ಮಾಡುವಂತೆ ಖಡಕ್ ಆದೇಶ ಹೊರಡಿಸಬೇಕಿತ್ತು ಆದ್ರೆ ಅವರು ವ್ಯಾಪಾರಸ್ಥರು ಬರುತ್ತಿಲ್ಲವೆಂದು ನೂತನ ಮಾರುಕಟ್ಟೆ ಮಳಿಗೆ ಬಂದ್ ಮಾಡಿ ಹಂದಿಗಳ ವಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇದರಿಂದಾಗಿ ಮಳಿಗೆ ನಿರ್ಮಾಣಕ್ಕಾಗಿ ವಿನಿಯೋಗಿಸಿದ ಲಕ್ಷ ಲಕ್ಷ ಹಣ ನೀರಿಗೆ ಹಾಕಿದಂತಾಗಿದೆ.

ಇನ್ನೂ ಬೀದಿ ಬದಿಯಲ್ಲಿಯೇ ವ್ಯಾಪಾರ ಮುಂದುವರೆದಿದ್ದರಿಂದ ನಿತ್ಯ ರಸ್ತೆಮಧ್ಯೆಯೇ ಜನಜಂಗುಳಿ ನೆರೆಯುವುದರಿಂದ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಇನ್ನಾದರೂ ಪುರಸಭೆ ಸರಿಯಾದ ಕ್ರಮಕೈಗೊಂಡು ತನ್ನ ಜವಾಬ್ದಾರಿ ಮರೆಯುವುದೇ ಕಾದುನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

29/09/2020 06:41 pm

Cinque Terre

27.05 K

Cinque Terre

0

ಸಂಬಂಧಿತ ಸುದ್ದಿ