ಹುಬ್ಬಳ್ಳಿ: ಅದು ವಾಣಿಜ್ಯ ನಗರಿಯ ಪ್ರತಿಷ್ಠಿತ ನಗರ, ಇದೇ ರಸ್ತೆಯಲ್ಲೇ ಸಿಎಂ, ಮಾಜಿ ಸಿಎಂ, ಕೇಂದ್ರ ಸಚಿವರು ಓಡಾಡುತ್ತಾರೆ. ಸದ್ಯ ಈ ಪ್ರದೇಶದ ಜನರ ಗೋಳು ಹೇಳತೀರದ್ದಾಗಿದೆ. ಕಳೆದ ಒಂದು ತಿಂಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುತ್ತಿರುವುದರಿಂದ ರಸ್ತೆ, ರಾಜಕಾಲುವೆ ರಾಜ ಮರ್ಯಾದೆ ನೀಡಿ ಸುಂದರಗೊಳಿಸಿದ್ದರು. ಆದ್ರೆ ಒಂದೇ ಒಂದು ಮಳೆಗೆ ಆ ರಾಜ ಕಾಲುವೆ ಜನರ ಜೀವನದ ಜೊತೆ ತಾಂಡವ ಆಡುತ್ತಿದೆ.
ಒಂದು ಕಡೆ ಮನೆ ಮತ್ತು ಅಪಾರ್ಟ್ಮೆಂಟ್‌ಗಳಲ್ಲಿ ನೀರು, ಇನ್ನೊಂದಡೆ ರಾಜ ಕಾಲುವೆ ತುಂಬಿ ನೀರು ನುಗ್ಗಿ ವಾಹನಗಳು ದುರಸ್ತಿಗೆ ಬಂದ ದೃಶ್ಯಗಳು. ಇದೆಲ್ಲ ಕಂಡು ಬಂದಿದ್ದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ರಾಜ ಕಾಲುವೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ.
ನಿನ್ನೆ ಸಂಜೆ ಸುರಿದ ಮಳೆಯಿಂದಾಗಿ ರಾಜ ಕಾಲುವೆ ತುಂಬಿ ಮಳೆ ನೀರು ಬಡಾವಣೆಗಳಿಗೆ ನುಗ್ಗಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಮಳೆ ನೀರಿಗೆ ಮುಳುಗಿ ಹೋಗಿದ್ದವು. ಇದರಿಂದಾಗಿ ಬೆಳಗ್ಗೆಯಾದ್ರೆ ವಾಹನ ಮಾಲೀಕರು ಗ್ಯಾರೇಜ್ ಕಡೆಗೆ ಮುಖ ಮಾಡಿದ್ದಾರೆ.
ಇನ್ನು ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆ ಒಳಗೆ ನೀರು ನುಗ್ಗಿದ್ದರಿಂದ ದಿನ ಬಳಕೆ ವಸ್ತುಗಳು ಹಾಳಾಗಿದ್ದವು. ಇದರಿಂದ ಅದೆಷ್ಟೋ ಕುಟುಂಬಗಳು ಉಪವಾಸ ಇವೆ. ಬೆಳಗ್ಗೆ ಕೆಲಸಕ್ಕೆ ಹೋಗದೆ ವಾಹನಗಳನ್ನು ರಿಪೇರಿ ಮಾಡಿಸುತ್ತಿದ್ದಾರೆ. ಸೂಕ್ತ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಸ್ಮಾರ್ಟ್ ನಗರಿ ಎಂದು ಕರೆಸಿಕೊಳ್ಳಬೇಕಿದ್ದ ಹುಬ್ಬಳ್ಳಿ ಧಾರವಾಡ ನಗರಕ್ಕೆ ಇಂತಹ ಘಟನೆಗಳು ಚುತಿ ತರುವಂತಿವೆ. ಈಗಲಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯವಸ್ಥೆ ಸರಿಪಡಿಸುವ ಕಾರ್ಯ ಮಾಡಬೇಕಿದೆ.
Kshetra Samachara
11/10/2022 06:51 pm