ಧಾರವಾಡ: ಕಳೆದ ಹತ್ತು-ಹನ್ನೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜುಲೈ 1ರಿಂದ ಇಲ್ಲಿಯವರೆಗೆ ಧಾರವಾಡ ತಾಲೂಕಿನಾದ್ಯಂತ ಸುಮಾರು 33 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡದಲ್ಲಿ ಜನ, ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಬಾರದಂತಾಗಿವೆ. ಮಣ್ಣಿನ ಮನೆಗಳು ಕುಸಿದು ಬೀಳುತ್ತಿವೆ. ಗ್ರಾಮಾಂತರ ಭಾಗದಲ್ಲಿನ ರಸ್ತೆಗಳೂ ಹದಗೆಟ್ಟಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.
ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಮಲ್ಲಪ್ಪ ವಾಲ್ಮೀಕಿ, ಶಂಭುಲಿಂಗಯ್ಯ ಖಾನಾಪುರ ಎಂಬುವವರ ಮನೆಗಳು ಕುಸಿದು ಬಿದ್ದಿವೆ. ಒಟ್ಟಾರೆಯಾಗಿ ಜುಲೈ 1ರಿಂದ ಜುಲೈ 13 ರವರೆಗೆ ಧಾರವಾಡ ತಾಲೂಕಿನಾದ್ಯಂತ 33 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ತಹಶೀಲ್ದಾರ ಸಂತೋಷ ಹಿರೇಮಠ ತಿಳಿಸಿದ್ದಾರೆ.
Kshetra Samachara
13/07/2022 05:58 pm