ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಮಳೆರಾಯನ ಅವಾಂತರ, ಸೇತುವೆ ಕಳೆದುಕೊಂಡ ಪೂರ ಗ್ರಾಮ; ದುರಸ್ತಿ ಕಾಣದೆ ಜನ ತತ್ತರ.

ವರದಿ:ಮಹಾಂತೇಶ ಪಠಾಣಿ

ಅಳ್ನಾವರ: ಅಳ್ನಾವರ ತಾಲೂಕಿನಾದ್ಯಂತ ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಸಾಮಾನ್ಯ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ.ಮಳೆ ನಿಂತು ಅರ್ಧ ತಿಂಗಳು ಕಳೆದರೂ ಮಳೆ ಸೃಷ್ಟಿಸಿದ ಅವಾಂತರ ಮಾತ್ರ ಅಷ್ಟಿಷ್ಟಲ್ಲ.

ಅಳ್ನಾವರ ಪಟ್ಟಣದಿಂದ ಪೂರ ಗ್ರಾಮಕ್ಕೆ ತೆರಳುವ ಸೇತುವೆ ಮಳೆಯ ಹೊಡೆತಕ್ಕೆ ಸಂಪೂರ್ಣ ನಾಶವಾಗಿ, ಸಂಚರಿಸಲು ರಸ್ತೆ ಇಲ್ಲದೆ ಪೂರ ಗ್ರಾಮದ ಜನರು ಪರದಾಡುತ್ತಿದ್ದಾರೆ.

ಸೇತುವೆಯ ಪಕ್ಕದಲ್ಲಿದ್ದ ಮಣ್ಣು ಕುಸಿದು ತಗ್ಗು ಬಿದ್ದಿದ್ದು,ಸೇತುವೆಯ ತಡೆ ಗೋಡೆ ಕೂಡ ನಾಶ ವಾಗಿದೆ.

ಪೂರ ಗ್ರಾಮದ ಜನರು ಸಂಪೂರ್ಣ ವಾಗಿ ಅಳ್ನಾವರ ಪಟ್ಟಣವನ್ನೇ ಅವಲಂಬಿಸಿದ್ದಾರೆ.ಸಂತೆ ಮಾಡಲು,ಹೊಲಗಳಿಗೆ ಗೊಬ್ಬರ ಕಾಳು ಗಳನ್ನ ಕೊಂಡೊಯ್ಯಲು, ಆಸ್ಪತ್ರೆಗೆ ಬರಲು ಹೀಗೆ ಪ್ರತಿಯೊಂದಕ್ಕೂ ಅಳ್ನಾವರ ಪಟ್ಟಣ ಈ ಗ್ರಾಮಕ್ಕೆ ಅಮೂಲ್ಯವಾದದ್ದು.

ಕಳೆದ ತಿಂಗಳು ಸುರಿದ ಅಕಾಲಿಕ ಭಾರಿ ಮಳೆಗೆ ಇಲ್ಲಿಯ ಸೇತುವೆ,ರಸ್ತೆ ಹಾಳಾಗಿದೆ.ದಾಟಲು ರಸ್ತೆ ಇಲ್ಲದಂತಾಗಿದೆ.ಮೊನ್ನೆ ಎಂ ಎಲ್ ಎ,ಸಚಿವರು ಬಂದರು ಇಲ್ಲಿಗೆ ಭೇಟಿ ನೀಡಿಲ್ಲ.ಹೀಗೆ ಆದರೆ ಈ ಸೇತುವೆ ನಿರ್ಮಾಣ ಕನಸಿನ ಮಾತಾಗುವುದು.

ಆದಷ್ಟು ಬೇಗ ಸೇತುವೆಯನ್ನ ಪುನರ್ ನಿರ್ಮಾಣ ಮಾಡಿ ಪೂರ ಗ್ರಾಮದ ಜನರಿಗೆ ರಸ್ತೆ ಒದಗಿಸಿ ಕೊಡಬೇಕು. ಇಲ್ಲವಾದರೆ ಈ ಗ್ರಾಮಕ್ಕೆ ಸಂಪರ್ಕವೇ ಇಲ್ಲ ದಂತಾಗುವುದು.

Edited By : Manjunath H D
Kshetra Samachara

Kshetra Samachara

02/08/2021 03:05 pm

Cinque Terre

116.64 K

Cinque Terre

1

ಸಂಬಂಧಿತ ಸುದ್ದಿ