ಕುಂದಗೋಳ : ತಾಲೂಕಿನ ಶಿಕ್ಷಕರ ಕನಸಿನ ಕೂಸು ನೂತನ ಗುರು ಭವನ ಕಟ್ಟಡಕ್ಕೆ ನಿರ್ಮಾಣ ಹಂತದಲ್ಲೇ ಕಟ್ಟಡದ ಕೆಳಗೆ ಕಲುಷಿತ ನೀರು ಸಂಗ್ರಹವಾದ ಬಗ್ಗೆ ಈ ಹಿಂದೆ ಪಬ್ಲಿಕ್ ನೆಕ್ಸ್ಟ್ ವರದಿ "ನಿರ್ಮಾಣಕ್ಕೂ ಮೊದಲೇ ಗುರು ಭವನ ಕಟ್ಟಡಕ್ಕೆ ನೀರಿನ ಕಾಟ" ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ಧಿ ಪ್ರಕಟಿಸಿ ಕಟ್ಟಡದ ಕೆಳಗೆ ಸಂಗ್ರಹವಾದ ಕಲುಷಿತ ನೀರಿನ ಅವ್ಯವಸ್ಥೆ ಹಾಗೂ ಶಿಥಿಲಾವಸ್ಥೆ ಭೀತಿಯಲ್ಲಿರುವ ಕಟ್ಟಡದ ದುಸ್ಥಿತಿ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿತ್ತು.
ಸಧ್ಯ ಈ ವರದಿ ಪ್ರಕಟಗೊಂಡ ಬಳಿಕ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗುರುಭವನ ಕಟ್ಟಡದಲ್ಲಿ ಸಂಗ್ರಹವಾದ ನೀರನ್ನು ಹೊರಹಾಕಲು ಕ್ರಮ ಕೈಗೊಂಡಿದ್ದು, ಎರೆಡು ಮೋಟಾರ್ ಮೂಲಕ ನೀರನ್ನು ಚರಂಡಿಗೆ ಹರಿಬಿಡುತ್ತಿದ್ದಾರೆ. ಈಗಾಗಲೇ ಸುರಿದ ಧಾರಾಕಾರ ಮಳೆಗೆ ಮತ್ತಷ್ಟೂ ನೀರು ಸೇರಿ ಗುರುಭವನ ಅವ್ಯವಸ್ಥೆ ಹಾದಿ ಹಿಡಿದಿದ್ದು ಸಧ್ಯ ನೀರು ಹೊರ ಹೋದ್ರೇ ಶೀಥಿಲಾವಸ್ಥೆಯಿಂದ ಕಟ್ಟಡ ಪಾರಾಗಬಹುದು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
30/07/2021 01:59 pm