ಕುಂದಗೋಳ : ಪ್ರತಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ್ರೆ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮಸ್ಥರಿಗೆ ಕುಂದಗೋಳ ಪಟ್ಟಣ ಸೇರೊದೆ ಕಷ್ಟದ ಸಮಸ್ಯೆಯಾಗಿದ್ದು ಅದರಲ್ಲಿ ಈ ವರ್ಷ ಅತಿವೃಷ್ಟಿ ಪರಿಣಾಮ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಜನರ ಬದುಕು ವಹಿವಾಟಿಗೆ ಮತ್ತಷ್ಟು ಹೊಡೆತ ಬಿದ್ದಿದೆ.
ಹೌದು ! ದೇವನೂರು ಹಂಚಿನಾಳ ನಡುವೆ ಇರುವ ಕತ್ತಿ ಹಳ್ಳ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದು ರಸ್ತೆ ಸಂಚಾರ ಬಂದ್ ಆಗಿದೆ ಹೀಗೆ ಸುರಿಯುತ್ತಿರುವ ಪ್ರವಾಹವನ್ನು ಲೆಕ್ಕಿಸದೆ ಮೊಣಕಾಲುದ್ದ ಬಟ್ಟೆ ಮೇಲಿತ್ತಿಕೊಂಡು ಬೈಕ್ ಸವಾರರು ಹರಸಾಹಸ ಮಾಡುತ್ತಾ ಪ್ರಾಣದ ಹಂಗು ತೊರೆದು ರಸ್ತೆ ದಾಟುತ್ತಿದ್ದಾರೆ.
ಸದ್ಯ ಈ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಹಂಚಿನಾಳ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮದವರು ಕಮಡೊಳ್ಳಿ ಮಾರ್ಗವಾಗಿ ಬಂದು ಕುಂದಗೋಳ ಸೇರಿತ್ತಿದ್ದಾರೆ, ಈ ಬಗ್ಗೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಗಮನಕ್ಕೆ ತಂದ್ರೂ ಪರಿಹಾರ ಕಾಣದೆ ಜನರು ಸುಸ್ತಾಗಿದ್ದು ನೀರಿನ ಹರಿವಿನ ಜೊತೆ ಸೆಣಸಾಟ ನಡೆಸಿದ್ದಾರೆ.
Kshetra Samachara
27/09/2020 01:04 pm