ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರುಣನ ಆರ್ಭಟ; ಮನೆಗೋಡೆ ಕುಸಿದು ವೃದ್ಧನಿಗೆ ಗಂಭೀರ ಗಾಯ

ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ವೃದ್ಧನ ಕಾಲಿನ ಮೇಲೆ ಮನೆಯ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ, ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ನಡೆದಿದೆ.

ಕೊಟಗೊಂಡಹುಣಸಿಯ ಹರಿಜನ ಓಣಿಯ ನಿವಾಸಿ ಸಹದೇವಪ್ಪ ಹನುಮಂತಪ್ಪ ಹಂಚಿನಮನಿ (66) ಗಾಯಗೊಂಡ ವೃದ್ಧ. ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಗೋಡೆ ಮಂಗಳವಾರ ಕುಸಿದಿದ ಪರಿಣಾಮ, ರಾತ್ರಿ ಮಲಗಿದ್ದ ವೇಳೆ ಗೋಡೆಯ ಇಟ್ಟಿಗೆಗಳು ಕಾಲು ಮೇಲೆ ಬಿದ್ದಿವೆ. ಪರಿಣಾಮ ವೃದ್ಧನ ಕಾಲು ಮೂಳೆ ಮುರಿದಿದ್ದು, ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರು.

ಇಂದು ಬೆಳಿಗ್ಗೆ ಅಕ್ಕಪಕ್ಕದ ಜನರು ಹೋಗಿ ನೋಡಿದಾಗ ಗೋಡೆ ಕಾಲಿನ ಮೇಲೆ ಬಿದ್ದಿರುವುದನ್ನು ಗಮನಿಸಿ ಕೂಡಲೇ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಚಂದ್ರಕಾಂತ ಶಿರಕೋಳ ಆಗಮಿಸಿ ಪರಿಶೀಲನೆ ನಡೆಸಿ, ಗಾಯಗೊಂಡ ವೃದ್ಧನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

Edited By : Somashekar
Kshetra Samachara

Kshetra Samachara

07/09/2022 03:44 pm

Cinque Terre

81.48 K

Cinque Terre

0

ಸಂಬಂಧಿತ ಸುದ್ದಿ