ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ
ನವಲಗುಂದ : ಅಬ್ಬಬ್ಬಾ ಏನ್ರಿ ಇದು ಕಸದ ರಾಶಿಗಳು, ಎಲ್ಲಿ ನೋಡಿದ್ರು ಕೇವಲ ಬಟ್ಟೆ, ಸಿರಿಂಜ್, ಸ್ಯಾಲೈನ್ ಗಳೇ ತುಂಬಿವೆಯಲ್ಲ ಅಂತಾ ನೋಡ್ತಾ ಇದ್ದೀರಾ, ಇದು ಯಾವುದೋ ಚರಂಡಿನೋ, ಸಣ್ಣ ಹಳ್ಳವೋ ಅಂತಾ ಭಾವಿಸಿದರೆ ಅದು ನಿಮ್ಮ ತಪ್ಪಾಗುತ್ತೆ, ಇದು ಸುಪ್ರಸಿದ್ದ ಬೆಣ್ಣೆ ಹಳ್ಳ ರೀ...
ಇಲ್ಲಿಗೆ ಬರುವ ಭಕ್ತರು ಯಾವ ರೀತಿ ಈ ಹಳ್ಳವನ್ನು ಹಾಳು ಮಾಡ್ತಾ ಇದ್ದಾರೆ ಅಂದ್ರೆ ಅದನ್ನ ಊಹಿಸಲು ಸಹ ಸಾಧ್ಯವಿಲ್ಲ ಅನ್ನಬಹುದು, ಇಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ನಿವಾರಣೆಯಾಗುತ್ತೆ ಅನ್ನೋ ಪ್ರತೀತಿ ಇದೆ ಹೀಗಾಗಿ ಇಲ್ಲಿ ಬಂದ ಭಕ್ತರು ಸ್ನಾನ ಮಾಡಿ ಉಟ್ಟ ಬಟ್ಟೆಯನ್ನು ಇಲ್ಲೇ ಬಿಸಾಡಿ ಹೋಗ್ತಾರೆ, ಇದರಿಂದಾಗಿ ಇಲ್ಲಿನ ಮಣ್ಣು, ನೀರು ಕಲುಷಿತವಾಗುತ್ತಿದೆ. ಅಷ್ಟೇ ಅಲ್ಲದೆ ಇಲ್ಲಿ ದೊಡ್ಡದಾಗಿ ಸ್ನಾನ ಮಾಡಿ ಬಟ್ಟೆ ಇಲ್ಲಿ ಬಿಡಬಾರದು ಅಂತಾ ಸೂಚನಾ ಫಲಕವನ್ನು ಸಹ ಹಾಕಿದ್ದಾರೆ ಆದ್ರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಜನರು ತಮಗೆ ಇಷ್ಟ ಬಂದಂತೆ ನಡೆದುಕೊಳ್ತಾ ಇದ್ದಾರೆ. ಇನ್ನೂ ಈ ಹಳ್ಳದ ಸ್ವಚ್ಛತೆಯತ್ತ ನೋಡಿದ್ರೆ ಯಮನೂರ ಗ್ರಾಮ ಪಂಚಾಯಿತಿ ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ. ವರ್ಷಕ್ಕೆ ಒಮ್ಮೆ ಬರುವ ಜಾತ್ರೆಯ ಸಂಧರ್ಭದಲ್ಲಿ ಮಾತ್ರ ಈ ಹಳ್ಳದ ಸ್ವಚ್ಛತೆಗೆ ಮುಂದಾಗ್ತಾರಂತೆ, ವರ್ಷವಿಡೀ ಜನರು ಇಲ್ಲಿ ಗೆ ಬಂದು ಗಲೀಜು ಮಾಡ್ತಾ ಇದ್ರೆ, ವರ್ಷಕ್ಕೊಮ್ಮೆ ಸ್ವಚ್ಛ ಮಾಡೋದ್ರಿಂದ ಏನೂ ಉಪಯೋಗ ಅಲ್ವಾ, ಇನ್ನೂ ಇಲ್ಲಿನ ಬಟ್ಟೆಗಳನ್ನು ಸ್ವಚ್ಛ ಮಾಡ್ತಾ ಇರೋರು ಯಾರೂ ಅಂತಾ ನೋಡ್ತಾ ಇದ್ದೀರಾ, ಇವರು ಎಂ ಎಫ್ ತಹಸೀಲ್ದಾರ್ ಅಂತಾ ಕಳೆದ 20 ವರ್ಷಗಳಿಂದ ಸ್ವಇಚ್ಛೆಯಿಂದ ಇಲ್ಲಿರುವ ಬಟ್ಟೆ, ಸಿರಿಂಜ್, ಸ್ಯಾಲೈನ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರೊಂದಿಗೆ ಶಬ್ಬೀರ್ ಅಹ್ಮದ್ ಖಾಜಿ ಕೂಡ ಸ್ವಚ್ಛತೆಗಾಗಿ ಕೈ ಜೋಡಿಸಿದ್ದಾರೆ. ಇನ್ನೂ ಈ ಬಗ್ಗೆ ಎಂ ಎಫ್ ತಹಸೀಲ್ದಾರ್ ಏನೂ ಹೇಳ್ತಾರೆ ನೀವೇ ಕೇಳಿ...
ಅದೇನೇ ಇರಲಿ ಯಮನೂರ ಬೆಣ್ಣೆ ಹಳ್ಳ ಅಂದ್ರೆ ಕೈ ಎತ್ತಿ ಮುಗಿಯೋ ಭಕ್ತರು ಎಲ್ಲಿಲ್ಲಾ ಹೇಳಿ, ಇಂತಹ ನೀರು ಕಲುಷಿತಗೊಂಡರೆ ಇಲ್ಲಿಗೆ ಬರುವ ಭಕ್ತರ ಆರೋಗ್ಯದ ಗತಿ ಏನಾಗ್ಬೇಕು, ಇದಕ್ಕೆ ಆದಷ್ಟು ಬೇಗ ಸಂಬಂಧ ಪಟ್ಟ ಜನಪ್ರತಿನಿದಿನಗಳಾಗಿರಬಹುದು ಅಥವಾ ಯಮನೂರ ಗ್ರಾಮ ಪಂಚಾಯಿತಿ ಆಗಿರಬಹುದು ಸೂಕ್ತ ನಿರ್ವಹಣೆಗೆ ಮುಂದಾಗಬೇಕಿದೆ. ವರ್ಷದ ಹನ್ನೆರಡು ತಿಂಗಳು ಇಲ್ಲಿಗೆ ಭಕ್ತರು ಬರ್ತಾರೆ ಅಂದ ಮೇಲೆ ಹನ್ನೆರಡು ತಿಂಗಳು ಸಹ ಇಲ್ಲಿ ಸ್ವಚ್ಛತೆ ಮಾಡಲೇ ಬೇಕಲ್ಲವೇ...
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ...
Kshetra Samachara
13/11/2020 02:03 pm