ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ವಚ್ಚ ಭಾರತ ಲೀಗ್ ಮೂಲಕ ಅವಳಿನಗರದ ಸ್ವಚ್ಚತೆಗೆ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಗಾರ್ಬೆಜ್ ಅಭಿಯಾನ ಯಶಸ್ವಿಗೊಳಿಸಿದ್ದು, ಈ ಕುರಿತು ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದೆ.
ಸಾಕಷ್ಟು ಅವ್ಯವಸ್ಥೆ ಹೊತ್ತು ಮುನ್ನಡೆಯುತ್ತಿರುವ ಅವಳಿನಗರದಲ್ಲಿ ಹೊಸ ಸಂಚಲನ ಸೃಷ್ಟಿಸುವ ಸದುದ್ದೇಶದಿಂದ ಹಲವು ಸಂಘಟನೆಯ ಮೂಲಕ ಇಂಡಿಯಾ ಗಾರ್ಬೇಜ್ ಅಭಿಯಾನದ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಿದೆ.
ಪ್ಲಾಸ್ಟಿಕ್ ಮುಕ್ತ ಪರಿಸರ, ಸ್ವಚ್ಚ ವಾತಾವರಣದ ಸದುದ್ದೇಶದಿಂದ ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದು, ಸಿದ್ಧಾರೂಢರ ಮಠದಿಂದ ಇಂತಹದೊಂದು ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಅಭಿಯಾನ ಯಶಸ್ವಿಗೊಳಿಸಿದೆ.
Kshetra Samachara
23/09/2022 12:21 pm