ಕುಂದಗೋಳ : ಮಿತವಾಗಿ ನೀರನ್ನು ಬಳಸಿ ಜೀವ ಜಲ ರಕ್ಷಣೆ ನಮ್ಮೇಲ್ಲರ ಹೊಣೆ ಎಂಬ ನಾಣ್ಣುಡಿ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ಮರೆಯಾಗಿದ್ದು ವಿನಾಕಾರಣ ಸತತ ಮೂರು ದಿನಗಳಿಂದ ಬೋರೆವೆಲನಿಂದ ನೀರು ಹರಿದು ಪೋಲಾಗುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ರಾಮನಕೊಪ್ಪ ಗ್ರಾಮದ ಕಂಬಾಳೆಪ್ಪ ದೇವಸ್ಥಾನದ ಆವರಣದಲ್ಲಿರುವ ಕೈ ಬೋರವೆಲ್ ನಿಂದ ನೀರು ಹರಿದು ಶೇಖರಣೆಯಾಗಿ ಗುಂಡಿಯಾಗಿ ಮಾರ್ಪಟ್ಟರು ಸ್ವ ಗ್ರಾಮದಲ್ಲೇ ಪಂಚಾಯಿತಿ ಇದ್ದರೂ ಕೂಡಾ ಯಾವ ಅಧಿಕಾರಿಯಾಗಲಿ ಪಂಚಾಯಿತಿ ಸಿಬ್ಬಂದಿಗಳಾಗಲಿ ಗಮನಿಸುತ್ತಿಲ್ಲ ಈ ಬಗ್ಗೆ ಗ್ರಾಮಸ್ಥರು ಪೋಲಾಗುವ ನೀರಿನ ಬಗ್ಗೆ ಸೂಕ್ತ ಕ್ರಮ ಜಾರಿ ಮಾಡುವಂತೆ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿದ್ದಾರೆ.
Kshetra Samachara
28/10/2020 02:30 pm