ಧಾರವಾಡ: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆಯೊಂದು ಇಂದು ಕುಸಿದು ಬಿದ್ದಿದೆ. ಆ ಮನೆ ಬೀಳುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಧಾರವಾಡದ ಕಮಲಾಪುರದ ಯಲ್ಲಪ್ಪ ಎಂಬುವವರಿಗೆ ಸೇರಿದ ಮನೆಯೇ ಕುಸಿದು ಬಿದ್ದಿದೆ. ಎರಡ್ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಮನೆ ಶಿಥಿಲಗೊಂಡಿತ್ತು. ಇಂದು ಮನೆ ಬೀಳುವ ಮುನ್ಸೂಚನೆ ಗೊತ್ತಾದ ಕೂಡಲೇ ಮನೆಯವರು ಹೊರಗಡೆ ಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಮನೆ ಕುಸಿದು ಬಿದ್ದಿದೆ. ಈ ದೃಶ್ಯವನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
Kshetra Samachara
12/10/2020 04:01 pm