ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಲೋಚಕರಿಲ್ಲದೆ ಸೊರಗುತ್ತಿದೆ ಹುಬ್ಬಳ್ಳಿಯ ಸಖಿ ಸೆಂಟರ್

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಎಲ್ಲವೋ ಸರಿಯಾಗಿದೆ ಎನ್ನುವಷ್ಟರಲ್ಲಿಯೇ ಮತ್ತೊಂದು ಅವ್ಯವಸ್ಥೆ ತಲೆದೋರಿದೆ. ಮಹಿಳೆಯರ ಅಳಲು ಕೇಳಬೇಕಾದ ವಿಭಾಗವೇ ಈಗ ಕಣ್ಣು ಮುಚ್ಚಿ ಕುಳಿತಿದೆ. ಹಾಗಿದ್ದರೇ ಯಾವುದು ಆ ವಿಭಾಗ ಅಂತೀರಾ ತೋರಸ್ತೀವಿ ನೋಡಿ...

ಹೌದು..ಕೌಟುಂಬಿಕ ಕಲಹ, ವರದಕ್ಷಿಣೆ ಸೇರಿದಂತೆ ನಾನಾ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಹಾಯಕ್ಕೆ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ 'ಸಖಿ ಒನ್ ಸೆಂಟರ್' ಕಳೆದ 9 ತಿಂಗಳಿಂದ ಆಪ್ತ ಸಮಾಲೋಚಕರೇ ಇಲ್ಲದೇ ಜನರ ಸಂಪರ್ಕ ಕಳೆದು ಕೊಂಡಂತಾಗಿದೆ.

ನಿರ್ಭಯಾ ಕೊಲೆ ಪ್ರಕರಣದ ನಂತರ ಇಡೀ ದೇಶಾದ್ಯಂತ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮಾಡುವ ಕೂಗು ಕೇಳಿ ಬಂದಿತ್ತು. ಅದಕ್ಕೆ ಸ್ಪಂದಿಸಿದ ಕೇಂದ್ರ ಸರಕಾರ ನಿರ್ಭಯಾ ಯೋಜನೆಯಡಿ 2019ರಲ್ಲಿ ಹು-ಧಾ ಪೊಲೀಸ್ ಕಮಿಷರೇಟ್ ಸೇರಿದಂತೆ ರಾಜ್ಯದ ಇತರ ಮಹಿಳಾ ಠಾಣೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಪ್ರಾರಂಭಿಸಿತು. ಈಗ ಹುಬ್ಬಳ್ಳಿ ಉಪನಗರ ಠಾಣೆಯ 'ಸಖಿ ಒನ್ ಸ್ಟಾಪ್ ಸೆಂಟರ್ಗೆ' ಅಧೋಗತಿ ಬಂದಿದೆ.

ಕೂಡಲೇ ಹು-ಧಾ ಪೊಲೀಸ್ ಆಯುಕ್ತರು 'ಸಖಿ ಒನ್ ಸೆಂಟರ್' ಬಗ್ಗೆ ಕಾಳಜಿವಹಿಸಿ ಆಪ್ತ ಸಮಾಲೋಚಕರ ನೇಮಕ ಮಾಡಿ ಆದೇಶ ಹೊರಡಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ. ಈ ಕುರಿತು ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಮಹಿಳೆಯರ ಹಿತವನ್ನು ಕಾಪಾಡಬೇಕಿದ್ದ ಸಖಿ ಒನ್ ಸ್ಟಾಫ್ ಸೆಂಟರ್ ಬಾಗಿಲು ಹಾಕಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

Edited By : Nagesh Gaonkar
Kshetra Samachara

Kshetra Samachara

19/01/2022 05:14 pm

Cinque Terre

19.21 K

Cinque Terre

0

ಸಂಬಂಧಿತ ಸುದ್ದಿ