ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ
ಹುಬ್ಬಳ್ಳಿ: ನಿಮ್ಮ ಪಬ್ಲಿಕ್ ನೆಕ್ಸ್ಟ್ ವಾರದ ಹಿಂದೆ ಹುಬ್ಬಳ್ಳಿಯ ಶಿರಡಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಅವ್ಯವಸ್ಥೆ ಬಗ್ಗೆ ವರದಿ ಬಿತ್ತರಿಸಿತ್ತು. ಆಗ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಾಲೆಯ ನಿರ್ವಹಣೆಗೆಂದು ಎನ್‌ಡಿಆರ್ ನಿಂದ 3 ಲಕ್ಷ ರೂ. ಮತ್ತು ವಿವೇಕ ಪ್ರೋಗ್ರಾಂ ನಿಂದ 2 ಲಕ್ಷ ರೂ. ಶಾಸಕರ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಆದ್ರೆ, ಇದುವರೆಗೂ ಮಾತ್ರ ಆ ಅನುದಾನ ಕಾರ್ಯರೂಪಕ್ಕೆ ಬಂದಿಲ್ಲ. ಈ ಸರ್ಕಾರಿ ಶಾಲೆ ಮೊದಲಿನ ರೀತಿಯಲ್ಲಿಯೇ ಇದೆ. ಈ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ಅವರಿಂದ...
ಅನುದಾನ ಬಿಡುಗಡೆಯಾಗಿದ್ದಕ್ಕೆ ಪಾಲಕರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸುತ್ತಿದ್ದರೆ, ಇನ್ನೊಂದೆಡೆ ಸಮಾಜ ಸೇವಕ ಕಿರಣ ಉಪ್ಪಾರ ಇಡೀ ಶಾಲೆಗೆ ಮತ್ತು ಕಾಂಪೌಂಡ್ ಗೆ ಪೇಂಟಿಂಗ್ ಮಾಡಿ ಕೊಡುತ್ತೇವೆಂದು ಮುಂದೆ ಬಂದಿದ್ದಾರೆ. ಇನ್ನು, ಶಿಕ್ಷಣಾಧಿಕಾರಿ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರ, ಸರ್ಕಾರಿ ಶಾಲೆ ಉಳಿಸಿ- ಬೆಳೆಸಬೇಕೆಂದು ಪಣ ತೊಟ್ಟರೆ, ಇತ್ತ ಕೆಲ ಸರ್ಕಾರಿ ಶಾಲೆಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಅದೇ ರೀತಿ ಹುಬ್ಬಳ್ಳಿ ಶಿರಡಿನಗರದ ಸರ್ಕಾರಿ ಶಾಲೆ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಕೂಡಲೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ನಂತರ ನಿರ್ವಹಣೆಗೆ ಅನುದಾನ ಬಿಡುಗಡೆಯಾಗಿದೆ. ಇನ್ನು ಆದಷ್ಟು ಬೇಗ ಅನುದಾನ ಪಡೆದು ಈ ಶಾಲೆಯನ್ನು ಸುಸಜ್ಜಿತ- ಸುಂದರ ಶಾಲೆಯನ್ನಾಗಿಸಬೇಕಿದೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
06/09/2022 07:21 pm