ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: BRTS ರಸ್ತೆ ಅವ್ಯವಸ್ಥೆಯಾಗಿ ಅವಳಿನಗರದ ಜನತೆಗೆ ದಿನನಿತ್ಯ ಸಮಸ್ಯೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯೆ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್‌ ಯೋಜನೆಯ ಅವ್ಯವಸ್ಥೆಯಿಂದಾಗಿ ಅವಳಿನಗರದ ಜನತೆ ದಿನನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ನವಲೂರು ಬಳಿ ನಿರ್ಮಿಸಲಾಗುತ್ತಿರುವ ಪರ್ಯಾಯ ರಸ್ತೆಯಿಂದಾಗಿ ಜನತೆ ಹೈರಾಣಾಗಿದ್ದಾರೆ. ಮೊದಲು ನಿರ್ಮಿಸಲಾಗಿದ್ದ ಸೇತುವೆಯನ್ನು ಬಿಟ್ಟು ಪರ್ಯಾಯ ರಸ್ತೆ ಮಾಡಲಾಗುತ್ತಿದ್ದು, ಅದರ ಪಕ್ಕವೇ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಆ ರಸ್ತೆಗಳು ಇದೀಗ ಹದಗೆಟ್ಟು ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಪ್ರಮುಖವಾಗಿ ನವಲೂರು ಭಾಗದ ಜನತೆ ಈ ಯೋಜನೆಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ನವಲೂರು ಸೇತುವೆ ಬಳಿ ವಾಹನ ಸಂಚಾರಕ್ಕೆಂದು ಬೇರೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದು, ಆ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳು ಕುಂಟುತ್ತ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ತಡೆಗೋಡೆಗಳು ಅವೈಜ್ಞಾನಿಕವಾಗಿದ್ದು, ಅವುಗಳಿಂದ ಯಾವಾಗ ಏನು ಅನಾಹುತ ಸಂಭವಿಸುತ್ತದೆಯೋ ಗೊತ್ತಿಲ್ಲ. ಕೂಡಲೇ ಬಿಆರ್‌ಟಿಎಸ್ ಸಂಸ್ಥೆ ಹದಗೆಟ್ಟ ರಸ್ತೆಗಳನ್ನು ದುರಸ್ಥಿಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

Edited By : Somashekar
Kshetra Samachara

Kshetra Samachara

13/09/2022 03:08 pm

Cinque Terre

49.03 K

Cinque Terre

2

ಸಂಬಂಧಿತ ಸುದ್ದಿ