ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆಲಸ ಬಿಟ್ಟು ಕೇಸ್‌ಗಾಗಿ ಅಲೆದಾಟ: ಅನ್ನದಾತನಿಗೆ ತೀರದ ಸಂಕಷ್ಟ

ಹುಬ್ಬಳ್ಳಿ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು, ತಮ್ಮಪರ ಹೋರಾಡಿದ ಸಂಘಟನೆಗಳ ಮೇಲಿನ ಪ್ರಕರಣಗಳನ್ನ ತೆಗೆದು ಹಾಕ್ತಾರೆ. ಆದರೆ ಅನ್ನದಾತನ ವಿಷಯದಲ್ಲಿ ಮಾತ್ರ ಆಳುವ ಸರಕಾರಗಳು ಪ್ರಕರಣ ದಾಖಲಿಸುವುದನ್ನು ಬಿಟ್ಟು, ತೆಗೆಯುವ ಕೆಲಸ ಮಾಡ್ತಿಲ್ಲ. ಕಳೆದೊಂದು ದಶಕದಿಂದ ನೀರಿಗಾಗಿ ಹೋರಾಡಿದ ರೈತರ ಮೇಲಿನ ಕೇಸ್ ತೆಗೆದಿರುವುದಾಗಿ ಸರಕಾರ ಹೇಳಿತ್ತು. ಆದರೆ ರೈತರಿಗೆ ಕೋರ್ಟ್ ನಿಂದ ಸಮನ್ಸ್ ಬರುವುದು ಮಾತ್ರ ನಿಂತಿಲ್ಲ. ನ್ಯಾಯಾಲಯಕ್ಕೆ ಅಲೆದು ಅಲೆದು ರೈತರು ಸುಸ್ತಾಗಿದ್ದಾರೆ..

ಹೌದು.. ಉತ್ತರ ಕರ್ನಾಟಕದ ರೈತರ ಹಾಗೂ ಈ ಭಾಗದ ಜನರ ಬಹುದೊಡ್ಡ ಹೋರಾಟ ಅಂದರೆ ಅದು ಮಹದಾಯಿ ಹೋರಾಟ. ಇಂದಿಗೂ ನಿರಂತರವಾಗಿ ನೀರಿಗಾಗಿ ಈ ಭಾಗದ ರೈತರು, ಸಂಘ ಸಂಸ್ಥೆಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ.‌ ಹೀಗೆ ನೀರಿಗಾಗಿ ಹೋರಾಟ ಮಾಡ್ತಿರುವ ರೈತರ ಮೇಲೆ ಹಾಕಿರುವ ಕೇಂದ್ರ ಸರ್ಕಾರದ ಕೇಸ್ ಇದುವರೆಗೂ ಹಿಂಪಡೆದಿಲ್ಲ. ಹೋರಾಟದ ವೇಳೆ ರೈಲ್ವೆ ತಡೆ ನಡೆಸಿದ್ದ ಐದು ನೂರಕ್ಕೂ ಹೆಚ್ಚು ಜನ ರೈತರಿಗೆ ಸಮನ್ಸ್ ಜಾರಿಯಾಗುತ್ತಲೇ‌ ಇದೆ. ಇದರ ಪರಿಣಾಮವಾಗಿ ಇಂದಿಗೂ ರೈತರು ಎಲ್ಲಾ ಕೆಲಸ ಬಿಟ್ಟು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗದ ನವಲಗುಂದ, ನರಗುಂದ ಹಾಗೂ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ರೈತರು ಸೇರಿದಂತೆ ಜಿಲ್ಲೆಯ ಹೋರಾಟಗಾರರ ಮೇಲೆ ನೂರಕ್ಕೂ ಅಧಿಕ ಕೇಸ್ ಗಳಿವೆ. ಈ ಹಿಂದೆ ಕೆಲವು ಕೇಸ್ ಗಳನ್ನು ಹಿಂಪಡೆಯಲಾಗಿದೆ. ಆದರೇ ಉಳಿದ ಕೇಸ್ ಗಳನ್ನು ಇದುವರೆಗೂ ಹಿಂಪಡೆದಿಲ್ಲ. ಸಾರ್ವಜನಿಕ ಹೋರಾಟಕ್ಕೆ ಮನೆಯ ಕೆಲಸ ಕಾರ್ಯವನ್ನು ಬಿಟ್ಟು ಹೋರಾಟ ನಡೆಸುವ ಹೋರಾಟಗಾರರು ಈಗ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಅಲ್ಲದೇ ರೈತ ತನ್ನ ಕೃಷಿ ಅವಧಿಯಲ್ಲಿಯೇ ಕೋರ್ಟ್ ಹಾಜರು ಆಗಬೇಕಾಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By : Shivu K
Kshetra Samachara

Kshetra Samachara

12/02/2022 05:38 pm

Cinque Terre

66.89 K

Cinque Terre

2

ಸಂಬಂಧಿತ ಸುದ್ದಿ