ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಳೆಗಾಲದಲ್ಲಿ ವಿದ್ಯಾರ್ಥಿಗಳ ಸ್ಥಿತಿ ಅಧೋಗತಿ: ಶೀಘ್ರವೇ ಸಿಗಬೇಕಿದೆ ಸಮಸ್ಯೆಗೆ ಮುಕ್ತಿ

ನವಲಗುಂದ : ನವಲಗುಂದ ಪಟ್ಟಣದ ಹೊರವಲಯದ ಇಬ್ರಾಹಿಂಪುರ ರಸ್ತೆಯಲ್ಲಿರುವ ಎಸ್ ಎಸ್ ಬಾಗಿ ಆಂಗ್ಲ ಮಾಧ್ಯಮ ಶಾಲೆಗೆ ಮಳೆಗಾಲದಲ್ಲಿ ವಿದ್ಯಾರ್ಥಿಗಳು ತೆರಳಬೇಕಾದರೆ ಕೈಯಲ್ಲಿ ಚಪ್ಪಲಿ ಹಿಡಿದು ಸಂಚರಿಸುವ ದುಸ್ಥಿತಿ ಇದೆ. ಈ ಬಗ್ಗೆ ಕಳೆದ ತಿಂಗಳು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು.

ಇದಕ್ಕೆ ಮೊದಲಿದ್ದ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್ ಮಾಯಾಚಾರ್ಯ ಅವರು ಪ್ರತಿಕ್ರಿಯೆ ನೀಡಿ, ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದರು. ಆದರೆ ಈಗ ಇದಕ್ಕೆ ಸಂಬಂಧ ಪಟ್ಟವರು ಸಮಸ್ಯೆಯನ್ನು ಮರೆತಿದ್ದಾರೆ ಎನ್ನುವಂತಾಗಿದೆ. ಸುಸಜ್ಜಿತ ರಸ್ತೆಯಿಂದ ಮಾತ್ರ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಮುಕ್ತಿ ಸಿಗಲಿದೆ.

ಮತ್ತೆ ಮಳೆ ಸುರಿದಿದ್ದೇ ಆದಲ್ಲಿ ಮಕ್ಕಳು ಪರದಾಟ ನಡೆಸೋದ್ರಲ್ಲಿ ಸಂಶಯವೇ ಇಲ್ಲ. ಇನ್ನು ನೂತನವಾಗಿ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿದ ಶಿವಾನಂದ ಮಲ್ನಾಡ್ ಅವರು ಈ ಬಗ್ಗೆ ಮಾತನಾಡಿದ್ದು ಹೀಗೆ...

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ನವಲಗುಂದ

Edited By : Somashekar
Kshetra Samachara

Kshetra Samachara

24/08/2022 03:58 pm

Cinque Terre

86.15 K

Cinque Terre

0

ಸಂಬಂಧಿತ ಸುದ್ದಿ