ಕುಂದಗೋಳ : ಊರಲ್ಲೇ ಸುತ್ತ ನಾಲ್ಕು ಗ್ರಾಮಗಳನ್ನ ಒಳಗೊಂಡ ಗ್ರಾಮ ಪಂಚಾಯಿತಿ ಇದ್ರೂ ಇಲ್ಲೊಂದು ಹಳ್ಳಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು ಗ್ರಾಮದಲ್ಲಿರುವ ಸಮಸ್ಯೆಗಳು ಪರಿಹಾರ ಕಾಣದೆ ಮತ್ತಷ್ಟೂ ಸಮಸ್ಯೆಗಳು ಉದ್ಭವಿಸುತ್ತಿವೆ.
ಹೌದು ! ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಹೋದ್ರೆ ಮೊದಲು ಕಸದ ರಾಶಿ ನಿಮಗೆ ಸ್ವಾಗತ ನೀಡುತ್ತೆ, ಇನ್ನೂ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಬಂದ್ ಆಗಿದೆ. ಸದ್ಯ ಗ್ರಾಮಸ್ಥರು ಕುಡಿಯಲು ಕೆರೆಯ ನೀರನ್ನು ಅವಲಂಬಿಸಿದ್ದು ಸುತ್ತ ಹುಲ್ಲು ಬೆಳೆದ ಕಾರಣ ನೀರು ಹಸಿರಾಡುತ್ತಿದ್ದು ಕರೆಯ ಸುತ್ತ ಸಾರಾಯಿ ಕುಡುಕರ ಹಾವಳಿ ಹೆಚ್ಚಿದ್ದು ಕೆರೆಗೆ ಸೂಕ್ತ ಬಂದೋಬಸ್ತ್ ಇಲ್ಲದೆ ಅಪಾಯಕ್ಕೆ ತೆರಿದಿದ್ದು ಕಾಲು ಜಾರಿ ಕೆರೆಗೆ ಬಿದ್ದಿದ್ದ ಮೂರು ಮಕ್ಕಳನ್ನ ಗ್ರಾಮಸ್ಥರ ಸಮಯ ಪ್ರಜ್ಞೆ ರಕ್ಷಿಸಿದೆ.
ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯರಿನಾರಣಪುರ ಗ್ರಾಮಕ್ಕೆ ಸಂಪರ್ಕ ಸಾಧಿಸುವ 5 ಕಿಲೋ ಮೀಟರ್ ರಸ್ತೆ ಹಾಳಾಗಿದ್ದು ಎಂಎಲ್ಎ, ಎಂಪಿಗಳಿಗೆ ಸಮಸ್ಯೆ ಗಮನಕ್ಕೆ ತಂದ್ರೂ ಪರಿಹಾರ ಸಿಕ್ಕಿಲ್ಲ, 4 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಗ್ರಾಮದ ಪ್ರತಿ ಬೀದಿಯ ಮೇಲೆ ಕೆಸರು ತಾಂಡವಾಡುತ್ತಿದ್ದು ಚರಂಡಿಗಳು ಹದುಗಿ ಹೋಗಿವೆ.
ಗ್ರಾಮದ ಅಂಗನವಾಡಿ ಮುಂದೆಯೆ ಕೊಳಚೆ ಸಂಗ್ರಹವಾಗಿದ್ದು ಮಕ್ಕಳಿಗೆ ರೋಗ ಭೀತಿ ಎದುರಾಗಿದೆ ಅಂಗನವಾಡಿ ಗೋಡೆಗೆ ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸುವ ಪ್ಯೂಸ್ ಅಳವಡಿಸಿದ್ದು ಸಂಭವಿಸಿಬಹುದಾದ ಅನಾಹುತಕ್ಕೆ ದಾರಿ ಮಾಡಿದ್ದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು ಆತಂಕದಲ್ಲಿದ್ದಾರೆ. ಇನ್ನೂ ಗ್ರಾಮದ ಬಸ್ ನಿಲ್ದಾಣ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದ್ದು ಕಸ ತುಂಬಿ ಗಬ್ಬೆದ್ದು ಹೋಗಿದ್ರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿರ ನಿದ್ರೆಗೆ ಜಾರಿದ್ದಾರೆ.
Kshetra Samachara
26/09/2020 04:17 pm